Header Ads
Header Ads
Breaking News

ಮಂಗಳೂರಿನ ಕುಲಾಲ ಭವನದಲ್ಲಿ ಸಾಹಿತಿ ಎಂ.ಕೆ ಸೀತರಾಮ್ ಕುಲಾಲ್‌ರಿಗೆ ಶ್ರದ್ಧಾಂಜಲಿ ಸಭೆ

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಮತ್ತು ಕುಲಾಲ ಸಂಘ ಮುಂಬಯಿ ಇವರ ಜಂಟಿ ನೇತೃತ್ವದಲ್ಲಿ ಇತ್ತೀಚೆಗೆ ನಿಧನರಾದ ತುಳು ರಂಗಭೂಮಿಯ ಹಿರಿಯ ನಾಟಕ ರಚನೆಕಾರ, ಸಾಹಿತಿ ಎಂ.ಕೆ. ಸೀತರಾಮ್ ಕುಲಾಲ್‌ರವರಿಗೆ ಶ್ರದ್ಧಾಂಜಲಿ ಸಭೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿಯಿರುವ ಕುಲಾಲ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಯವರು ಮಾತನಾಡಿ, ಎಂ.ಕೆ. ಸೀತರಾಮ ಕುಲಾಲ್‌ರವರ ವ್ಯಕ್ತಿತ್ವವವನ್ನು ಬಣ್ಣಿಸಿದರು.

ಆನಂತರ ರಘು ಎ ಮೂಲ್ಯ ಅವರು ಮಾತನಾಡಿ ಮೇರು ರಂಗನಟ, ಸಾಹಿತಿಯವರನ್ನು ನಾವು ಇವತ್ತು ಕಳೆದುಕೊಂಡಿದ್ದೇವೆ. ಅವರ ಗೀತ ರಚನೆ ಇವತ್ತಿಗೂ ನೆನಪಿನಲ್ಲಿಡುವಂತಹದು. ಅಂತವರನ್ನು ಕಳೆದುಕೊಂಡಿರುವುದು ದುಃಖಕರ ವಿಚಾರ ಎಂದು ಹೇಳಿದರು.
ಈ ಸಂದರ್ಭ ಕೃಷ್ಣ ಅತ್ತಾವರ, ಗಿರೀಶ್ ಸಾಲ್ಯಾನ್, ದಾಮೋದರ್, ರವೀಂದ್ರ ಮುನ್ನಿಪ್ಪಾಡಿ, ಸುರೇಶ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *