Header Ads
Header Ads
Breaking News

ಮಂಗಳೂರಿನ ಕೆಎಂಸಿಯ ವತಿಯಿಂದ ಆರನೇ ಫೆರ್‍ಸಿಕಾನ್ ಕಾನ್ಫರೆನ್ಸ್

ಮಂಗಳೂರಿನ ಕೆಎಂಸಿಯ ವತಿಯಿಂದ ಪಾರಂ ಫಾರ್ ಎತಿಕ್ಸ್ ರಿವೀವ್ ಕಮಿಟಿ ಇನ್ ಇಂಡಿಯಾ ಒಕ್ಕೂಟದ ಆರನೇ ರಾಷ್ಟ್ರೀಯ ಸಮ್ಮೇಳನವು ನಗರದ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆಂಶನ್ ಸೆಂಟರ್‌ನಲ್ಲಿ ನವೆಂಬರ್ 30ಹಾಗೂ ಡಿಸೆಂಬರ್ 1 ರಂದು ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜನಾ ಕಾರ್ಯದರ್ಶಿ ಹಾಗೂ ಮಂಗಳೂರು ಕೆಎಂಸಿಯ ಅಸೋಸಿಯೇಟ್ ಡೀನ್ ಡಾ. ಬಿ ಉಣ್ಣಿಕೃಷ್ಣನ್‌ರವರು ತಿಳಿಸಿದರು. 

ಅವರು ಮಂಗಳೂರಿನ ಪತ್ರಿಕಾsವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ವೈದ್ಯಕೀಯ ನ್ಯಾಯನೀತಿಯ ಕ್ಷೇತ್ರದಲ್ಲಿ ಅತ್ಯಂತ ನುರಿತ ವ್ಯಕ್ತಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದು, ಭಾರತೀಯ ತತ್ವಶಾಸ್ತ್ರ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ಫ್ರೋ. ಎಸ್ ಆರ್ ಭಟ್‌ರವರು ಪ್ರಮುಖ ಪ್ರವಚನ ನೀಡಿರುವರು ಎಂದು ಮಾಹಿತಿ ನೀಡಿದರು.

ಇನ್ನು ಇಂದಿನ ಕಾಲಘಟ್ಟದಲ್ಲಿ ನ್ಯಾಯನೀತಿಗಳ ಮೌಲ್ಯ ಕುಸಿಯುತ್ತಾ ಇದೆ. ಈ ವಿಷಯದ ಕುರಿತು ಅದರಲ್ಲೂ ವಿಶೇಷವಾಗಿ ಜೈವ ವೈದ್ಯಕೀಯ ಸಂಶೋಧನೆಯಲ್ಲಿ ನಾವು ಚರ್ಚಿಸುವುದು ಅತೀ ಅಗತ್ಯವಾಗಿದೆ ಆದುದರಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಸಮುದಾಯ ವೈದ್ಯಕೀಯ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾಕ್ಟರ್ ಪ್ರಸನ್ನ ಮಿತ್ರ, ಸಹ ಸಂಯೋಜನ ಕಾರ್ಯದರ್ಶಿ, ಡಾಕ್ಟರ್ ಅನಿಮೇಶ್ ಜೆಎನ್, ಡಾಕ್ಟರ್ ರೇಖಾ, ಡಾಕ್ಟರ್ ಶೀತಲ್ ಉಳ್ಳಾಲ್ ಉಪಸ್ಥಿತರಿದ್ದರು.

Related posts

Leave a Reply