Header Ads
Header Ads
Breaking News

ಮಂಗಳೂರಿನ ಕೆಎಂಸಿ ಆಸ್ಪತ್ರೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಣಿಪಾಲ್ ಅಕಾಡೆಮಿ ಹೈಯ್ಯರ್ ಎಜ್ಯುಕೇಶ್‌ನ್, ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವತಿಯಿಂದ ಕೆಎಂಸಿ ಸಂಸ್ಥೆಯ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸಂಜೀವಿನಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಂಸಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪತ್ರಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

   ಈ ಸಂದರ್ಭ ಮಾತನಾಡಿದ ಮಾಹೆ ಮಣಿಪಾಲ್‌ನ ವಯ್ಸ್ ಚಾನ್ಸಲರ್ ಡಾ. ವಿನೋದ್ ಭಟ್ ಅವರು, ಮಕ್ಕಳ ಕಲಿಕೆಯಲ್ಲಿ ಪೋಷಕರ ಪ್ರೋತ್ಸಾಹ ಅತಿ ಮುಖ್ಯ. ವಿದ್ಯಾರ್ಥಿಗಳೂ ಕೂಡ ಶ್ರಮಪಟ್ಟರೆ ಮಾತ್ರ ತಮ್ಮ ಗುರಿಯನ್ನು ತಲುಪಲು ಸಾಧ್ಯ ಎಂದರು.ಈ ಸಂದರ್ಭ ಕಾರ್ಯಕ್ರಮದಲ್ಲಿ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್, ಮಂಗಳೂರು ಕ್ಯಾಂಪಸ್‌ನ ಮಾಹೆ ವಾಯ್ಸ್ ಚಾನ್ಸಲರ್ ಪ್ರೊ. ಡಾ. ಸುರೇಂದ್ರ ವಿ ಶೆಟ್ಟಿ, ಕೆಎಂಸಿ ಯ ಡೀನ್ ಡಾ. ಎಮ.ವಿ ಪ್ರಭು, ಎಮ್‌ಸಿಒಡಿಎಸ್ ಡಾ. ದಿಲೀಪ್ ನಾಯಕ್, ಕೆಎಂಸಿ ಸಿಒಒ ಸಗೀರ್ ಸಿದ್ದಿಕ್ಕಿ ಉಪಸ್ಥಿತರಿದ್ದರು.

 

Related posts

Leave a Reply