
ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಯುವತಿಯ ಮೇಲೆ ಆಕೆಯ ಹಳೆಯ ಸ್ನೇಹಿತ ಮತ್ತು ಅವನ ಗೆಳೆಯರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮೂವರು ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಕುಮಾರ್ ಹೇಳಿದ್ರು. ಇನ್ನು ಬಂದಿತ ಆರೋಪಿಗಳನ್ನು ಬೊಕ್ಕಪಟ್ಣದ ತ್ರಿಶೂಲ್ ಸಾಲಿಯಾನ್, ಕೋಡಿಕಲ್ನ ಪ್ರಶಾಂತ್ ಪೂಜಾರಿ ಮತ್ತು ಅಶೋಕ ನಗರದ ದ್ಯಾನೇಶ ಎಂಬಾತನ್ನು ಬಂಧನ ಮಾಡಲಾಗಿದೆ,
ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ಆರೋಪಿ ತ್ರಿಶೂಲ್ ಗೆ ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾಗಿತ್ತು. ಬಳಿಕ ಪರಸ್ಪರ ಪ್ರೀತಿ ಮಾಡುತ್ತಿದ್ದ ಇಬ್ಬರು ಯಾವುದೋ ಕಾರಣಕ್ಕೆ ವೈಮನಸ್ಸು ಉಂಟಾಗಿ ಯುವತಿ ಆತನಿಂದ ದೂರವಾಗಿದ್ದಳು. ಹೀಗಾಗಿ ಆತ ನೀಡಿದ ಗಿಫ್ಟ್ಗಳನ್ನು ಮರಳಿಸಲು ಕೆಲ ದಿನಗಳ ಹಿಂದೆ ನಗರದ ಬಂಟ್ಸ್ ಹಾಸ್ಟೆಲ್ ಬಳಿ ಬರುವಂತೆ ಹೇಳಿದ್ದಳು. ಈ ವೇಳೆಯು ತ್ರಿಶೂಲ್ ಆಕೆಯ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದ ಎಂದು ತಿಳಿದು ಬಂದಿದೆ.ಇದಾದ ಬಳಿಕ ಆಕೆಯ ಮೇಲೆ ದ್ವೇಷ ಸಾಧಿಸಿದ್ದ ತ್ರಿಶೂಲ್, ಜ. 30ರಂದು ಹೋಟೆಲ್ ನಲ್ಲಿ ಯುವತಿಯು ಸ್ನೇಹಿತರೊಂದಿಗೆ ಆಗಮಿಸಿ ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದ ವೇಳೆ ಸ್ನೇಹಿತರೊಂದಿಗೆ ಆಗಮಿಸಿದ್ದ ಈತ ದಾಳಿಗೆ ಯತ್ನಿಸಿದ್ದಾನೆ. ಈ ಸಂದರ್ಭ ಜೊತೆಗಿದ್ದ ಸ್ನೇಹಿತರು ಆಕೆಯನ್ನು ಕಾಪಾಡಲೆಂದು ಧಾವಿಸಿದ್ದು, ಈ ಸಂದರ್ಭ ಓರ್ವ ಸ್ನೇಹಿತ ಕೂಡಾ ಚೂರಿ ಇರಿತಕ್ಕೊಳಗಾಗಿದ್ದಾನೆ ಎಂದು ಪೊಲೀಸ್ ಕಮೀಷನರ್ ಮಾಹಿತಿ ನೀಡಿದರು.