Header Ads
Breaking News

ಮಂಗಳೂರಿನ ಜನತೆಗೆ ಜಿಲ್ಲಾಡಳಿತದಿಂದ ಸಿಹಿಸುದ್ದಿ: ಏನದು?

ತುಂಬೆ ಅಣೆಕಟ್ಟಿನಿಂದ ಏಪ್ರಿಲ್ 30ರವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರಿನ ನಿರಂತರ ಪಂಪಿಂಗ್ ನಡೆಯಲಿದ್ದು, ತಾತ್ಕಾಲಿಕವಾಗಿ ರೇಷನಿಂಗ್ ಸ್ಥಗಿತಗೊಳಿಸಲಾಗಿದೆ.

ಶಂಭೂರಿನ ಎಎಂಆರ್ ಡ್ಯಾಂನಿಂದ ನೀರು ಬಿಟ್ಟ ಎರಡು ದಿನಗಳ ಬಳಿಕ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಸ್ಥಿರಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.

ರೇಷನಿಂಗ್ ವೇಳಾಪಟ್ಟಿಯಂತೆ ಬುಧವಾರ ಬೆಳಗ್ಗೆ 6 ಗಂಟೆಯಿಂದ ಮುಂದಿನ ಎರಡು ದಿನ ಪಂಪಿಂಗ್ ಸ್ಥಗಿತಗೊಳಿಸಬೇಕಿತ್ತು. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ರೇಷನಿಂಗ್ ಅಗತ್ಯವಿಲ್ಲ ಎಂದು ಸ್ಥಳೀಯ ಶಾಸಕರು, ಮಾಜಿ ಶಾಸಕರು ಹಾಗೂ ಪಾಲಿಕೆ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಎಎಂಆರ್ ಡ್ಯಾಂನಿಂದ ನೀರು ಬಿಟ್ಟು ಎರಡು ದಿನ ಪರಿಸ್ಥಿತಿ ಅವಲೋಕಿಸುವುದು, ಅದುವರೆಗೆ ರೇಷನಿಂಗ್ ಮಾಡದಿರಲು ಮತ್ತು ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿ ತೀರ್ಮಾನಿಸಿದ್ದರು.

ತುಂಬೆಯಲ್ಲಿ ಮಂಗಳವಾರ ರಾತ್ರಿ 5.2 ಮೀ.ನಷ್ಟಿದ್ದ ನೀರು ಎಎಂಆರ್ ನೀರು ಬಿಟ್ಟ ಬಳಿಕ ಬುಧವಾರ ಸಾಯಂಕಾಲ ವೇಳೆಗೆ 5.10 ಮೀ.ಗೆ ಏರಿಕೆಯಾಗಿತ್ತು. ನಿರಂತರ ಪಂಪಿಂಗ್ ಬಳಿಕ ಗುರುವಾರವೂ 5.10 ಮೀ. ನೀರು ಇರುವ ಹಿನ್ನೆಲೆಯಲ್ಲಿ ಮತ್ತೆ ಐದು ದಿನ ಪಂಪಿಂಗ್ ಮುಂದುವರಿಯಲಿದೆ.

Related posts

Leave a Reply

Your email address will not be published. Required fields are marked *