Header Ads
Breaking News

ಮಂಗಳೂರಿನ ಜ್ಯುವೆಲ್ಲರಿ ದರೋಡೆ ಪ್ರಕರಣ : ಅಫ್ಘಾನ್ ಮೂಲದ ಇಬ್ಬರು ಸೇರಿ ಮೂವರ ಬಂಧನ

ಮಂಗಳೂರು ನಗರದ ಭವಂತಿ ಸ್ಟ್ರೀಟ್‌ನ ಅರುಣ್ ಜ್ಯುವೆಲ್ಲರಿ ಸ್ಟೋರ್‌ನಲ್ಲಿ ಸೆಪ್ಟಂಬರ್ 2ರ ತಡರಾತ್ರಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಫ್ಘಾನ್ ಮೂಲದ ಕ್ರಿಮಿನಲ್‌ಗಳು ಸೇರಿದಂತೆ ಮೂರು ಮಂದಿಯನ್ನು ಬಂಧಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ದರೋಡೆ ಜಾಲವನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿಂದು ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಡಾ. ಹರ್ಷ, ಅತ್ಯಂತ ಸಂಘಟಿತ ಹಾಗೂ ಸುಸಜ್ಜಿತ ಸಲಕರಣಗಳನ್ನು ಬಳಸಿ ನಡೆಸಲಾಗಿದ್ದ ಈ ಅಂತರಾಷ್ಟ್ರೀಯ ದರೋಡೆ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಸುಮಾರು 20 ದಿನಗಳ ಅಂತರದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

Related posts

Leave a Reply

Your email address will not be published. Required fields are marked *