Header Ads
Header Ads
Header Ads
Header Ads
Header Ads
Header Ads
Breaking News

ಮಂಗಳೂರಿನ ತೋಟಬೆಂಗ್ರೆಯಲ್ಲಿ ಸ್ವಚ್ಛ ಭಾರತ ಅಭಿಯಾನ

ಸ್ವಚ್ಚ ಭಾರತ ಪರಿಕಲ್ಪನೆಯಲ್ಲಿ ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ತೋಟಬೆಂಗ್ರೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಕ್ಕಳು ಸೇರಿದಂತೆ ವಿವಿಧ ಸಂಘಟನೆಯನ್ನು ಈ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದರು.


ಮಂಗಳೂರಿನ ಮಾತಾ ಅಮೃತಾನಂದಮಯಿ ಮಠ, ರೋಟರಿ ಸಮುದಾಯ ದಳ ಮಿಲಾಗ್ರಿಸ್ ಪಿಯು ಕಾಲೇಜಿನ ಎನ್‌ಎಸ್‌ಎಸ್ ಘಟಕ ಮತ್ತು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಸ್ವಚ್ಛತಾ ಅಭಿಯಾನ ನಡೆಯಿತು.
 ಸ್ವಚ್ಛ ಭಾರತ ಅಭಿಯಾನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ನಡೆದ ಸ್ವಚ್ಚಾತಾ ಕಾರ್ಯಕ್ಕೆ ಮಾತಾ ಅಮೃತಾನಂದ ಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ವಸಂತ ಪೆರ್ಲ ಅವರು ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿದ ಅವರು, ನಮ್ಮ ಆರೋಗ್ಯ ಉಳಿಯಬೇಕು ಅಂದ್ರೆ ಸ್ವಚ್ಛತೆ ಬಹಳ ಮುಖ್ಯ. ಹಾಗಾಗಿ ಇಡೀ ಭಾರತ ದೇಶದಲ್ಲಿ ಸ್ವಚ್ಛತೆಯ ಪರಿಕಲ್ಪನೆಯನ್ನು ಮೊಟ್ಟ ಮೊದಲಿಗೆ ಕೊಟ್ಟಿರುವುದು ಮಾತಾ ಅಮೃತಾನಂದಮಯಿ ದೇವಿಯವರು. ಮಾತಾ ಅಮೃತಾನಂದಮಯಿ ಮಠದ ವತಿಯಿಂದ ದೇಶಾದ್ಯಂತ 2009 ರಿಂದ ಸ್ವಚ್ಛತಾ ಆಂದೋಲನವನ್ನು ಕೈಗೊಳ್ಳಲಾಗಿದೆ. ಅದೇ ರೀತಿ ಮಂಗಳೂರಿನ ಯೂನಿಟಿ ವತಿಯಿಂದಲೂ ಸ್ವಚ್ಚತಾ ಅಂದೋಲವನ್ನು ಮಂಗಳೂರಿನ ಪರಿಸರದಲ್ಲಿ ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.
 ಆನಂತರ ಬೆಂಗ್ರೆ ಮೊಗವೀರ ಸಭಾದ ಚೇತನ್ ಬೆಂಗ್ರೆ ಅವರು ಮಾತನಾಡಿ, ಸ್ವಚ್ಛ ಭಾರತ ಆಂದೋಲನ ಮಾತಾ ಅಮೃತಾನಂದ ಮಯಿ ಮಠದ ವತಿಯಿಂದ ಆಯೋಜಿಸಲಾಗಿದ್ದು ಮಿಲಾಗ್ರಿಸ್ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ. ಈ ಅಂದೋಲನ ಮುಂದುವರಿಯುತ್ತಲೇ ಇರಲಿ ಎಂದು ಹೇಳಿದರು.
 ಆನಂತರ ಮಾತಾ ಅಮೃತಾನಂದ ಮಯಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರಸಾದ ಕಾಂಚನ್ ಅವರು ಮಾತನಾಡಿ, ತೋಟಬೆಂಗ್ರೆಯ ಪರಿಸರದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಈ ಅಭಿಯಾನಕ್ಕೆ ತೋಟಬೆಂಗ್ರೆ ಗ್ರಾಮದ ಜನತೆಯೂ ಸಹ ಕೈಜೋಡಿಸಿದ್ದಾರೆ. ಮಾತಾ ಅಮೃತಾನಂದಮಯಿ ಸಮಿತಿಯ ವತಿಯಿಂದ ಈಗಾಗಲೇ ೧೯೮ ಸ್ವಚ್ಛತಾ ಕಾರ್ಯವನ್ನು ಮಾಡಿದ್ದೇವೆ ಎಂದು ಹೇಳಿದರು.
 ಈ ಸಂದರ್ಭ ಮಾಧವ ಸುವರ್ಣ, ಸುರೇಶ್ ಆಮಿನ್, ಮಿಲಾಗ್ರಿಸ್ ಕಾಲೇಜಿನ ಎನ್‌ಎಸ್‌ಎಸ್ ಆಫೀಸರ್ ಕಿರಣ, ಡಾ. ರಾಹುಲ್, ರೋಟರಿ ಸಮುದಾಯ ದಳ ಬೆಂಗ್ರೆಯ ಅಧ್ಯಕ್ಷರಾದ ಸಂಜಯ್, ಉಪಾಧ್ಯಕ್ಷರಾದ ಲೋಕೇಶ್, ಕಾರ್ಯದರ್ಶಿ ರಾಕೇಶ್, ಬೆಂಗ್ರೆ ಶಾಲೆಯ ಶಿಕ್ಷಕ ಸುಮಾ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಶರತ್ ಮಂಗಳೂರು

Related posts

Leave a Reply

Your email address will not be published. Required fields are marked *