Header Ads
Header Ads
Breaking News

ಮಂಗಳೂರಿನ ಪತ್ರಿಕಾಭವನದಲ್ಲಿ ’ಪತಿಮಾನಿ-ಕಟಿಮಾನಿ’ ಪುಸ್ತಕ ಬಿಡುಗಡೆ ಸಮಾರಂಭ

ಸುರತ್ಕಲ್‌ನ ಶ್ರೀ ಬಬ್ಬುಸ್ವಾಮಿ ಅಧ್ಯಯನ ಕೇಂದ್ರ ಪ್ರಕಟಿಸಿರುವ ಯುವ ಸಾಹಿತಿ ನವೀನ್ ಸುವರ್ಣ ಪಡ್ರೆ ಅವರ 7ನೇ ಕೃತಿ ’ಪತಿಮಾನಿ-ಕಟಿಮಾನಿ’ ಬಿಡುಗಡೆ ಸಮಾರಂಭ ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಯಿತು.

ಕೃತಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ ಭಂಡಾರಿಯವರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಇವತ್ತು ತುಳು ಭಾಷೆಯ ಉಳಿವಿಗೆ ಯುವ ಸಾಹಿತಿಗಳು ಕೊಡುಗೆ ಅಪಾರವಾಗಿ ಬೇಕಾಗಿದೆ. ತುಳು ಭಾಷೆ ಮತ್ತು ಸಂಸ್ಕೃತಿ ಉಳಿವಿಗಾಗಿ ಸಾಹಿತ್ಯ ಸೃಷ್ಠಿಯಾಗಬೇಕು ಎಂದು ಹೇಳಿದರು.ಆನಂತರ ಜಾನಪದ ವಿದ್ವಾಂಸರಾದ ಕೆ.ಕೆ. ಪೇಜಾವರ ಅವರು ಮಾತನಾಡಿ, ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿರುವ ಯುವ ಸಾಹಿತಿ ನವಿನ್ ಸುವರ್ಣ ಪಡ್ರೆ ಅವರು, ತುಳುನಾಡಿನ ಆರಾಧ್ಯ ದೈವಗಳ ಮದು, ಮದಿಪು, ನುಡಿಕಟ್ಟುಗಳನನ್ನು ಒಳಗೊಂಡ ಕೃತಿಯನ್ನು ರಚಿಸಿದ್ದಾರೆ. ಅಧ್ಯಯನ ನಡೆಸಿ ರಚಿಸಿರುವಂತಹ ಕೃತಿಯಾಗಿದೆ ಎಂದು ಹೇಳಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ರಂಗಕರ್ಮಿ ಭರತ್ ಎಸ್ ಕರ್ಕೆರ, ರಮೇಶ್ ಪಾಲ್ ಉಪಸ್ಥಿತರಿದ್ದರು.

Related posts

Leave a Reply