Header Ads
Breaking News

ಮಂಗಳೂರಿನ ಪುರಭವನದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

ದ.ಕ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯು ಮಂಗಳೂರಿನ ಪುರಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಸದಸ್ಯರಾದ ಎ. ಜಿ. ಗಂಗಾಧರ ಅವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದ್ರು. ಬಳಿಕ ಡೊಂಟ್‍ಲೆಟ್ ಟೊಬೊಕೋ ಟೇಕ್ ಯುವರ್ ಬ್ರೇಥ್ ಎವೇ ಎನ್ನುವ ಕೋಟ್ಪಾ -2003 ಕಾಯಿದೆಯ ಉನ್ನತ ಅನುಷ್ಠಾನದ ಘೋಷಣೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭ ಮತಾನಾಡಿದ ಅವರು, ರಾಜ್ಯದ ಗಡಿಗಳನ್ನು ದೇಶದ ಗಡಿ ರೇಖೆ ಮೀರಿ ವಿಶ್ವದಲ್ಲೆಡೆ ಅರಿವು ಮೂಡಿಸುವ ಜಾಗೃತಿ ಈ ತಂಬಾಕು ರಹಿತ ದಿನಾಚರಣೆ ಅಗತ್ಯವಾಗಿದೆ. ತಂಬಾಕು ಉಪಯೋಗಿಸುವ ಒಬ್ಬನಿಂದ ಇಡೀ ಸಮಾಜದ ಸ್ವಾಸ್ಥ್ಯ ಕೆಡುವುದಾದರೆ ಅದನ್ನ ನಿಯಂತ್ರಿಸಲು ನಾವೆಲ್ಲ ಪಣತೊಡಬೇಕು. ಶೋಕಿಗಾಗಿ ತಂಬಾಕು ಸೇವನೆ ಮಾಡಿ ಕೊನೆಗೆ ರೋಗವನ್ನ ತಂದುಕೊಂಡು ಬದುಕನ್ನು ನರಕಯಾತನೆ ಅನುಭವಿಸುವ ಬದಲು ಯುವ ಜನತೆ ಇಂತಹ ಕೆಟ್ಟ ಚಟವನ್ನ ಮಟ್ಟ ಹಾಕೋಣ ಎಂದು ತಿಳಿಸಿದರು.

ಇನ್ನು ದ.ಕ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ಆರ್. ಸೆಲ್ವಮಣಿ ಅವರು ಮಾತನಾಡಿ, ಈಗಿನ ಬೆಳವಣಿಗೆಯಲ್ಲಿ ತಂಬಾಕು ಸೇವನೆ ಬಹಳಷ್ಟು ಕಡಮೆಯಾಗಿದೆ. ತಂಬಾಕು ಸೇವನೆ ಬಗ್ಗೆ ಜನರಲ್ಲಿ ಪ್ರಾಥಾಮಿಕವಾಗಿ ಜನ ಜಾಗೃತಿ ಅಗುತ್ತ ಇದೆ. ಶಾಲಾ ಕಾಲೇಜಿನಲ್ಲೇ ಇದರ ಅರಿವು ಇನ್ನೂ ಹೆಚ್ಚಿಸಬೇಕು. ನಮ್ಮ ದೇಶದಲ್ಲಿ ತಂಬಾಕು ಕೃಷಿಯನ್ನು, ಉದ್ದಿಮೆಯನ್ನು ಉತ್ತೇಜಿಸಲು ಸಹಕಾರ ನೀಡುತ್ತಿಲ್ಲ. ಕ್ರಮೇಣ ಇದರ ಉತ್ಪಾದನೆ ಕಡಮೆ ಅಗುತ್ತದೆ ಎಂಬುದಾಗಿ ತಿಳಿಸಿದರು.

ಇದೇ ವೇಳೆ ಡಿಸಿಪಿ ಹನುಮಂತರಾಯ ಪ್ರಸಕ್ತ ವರ್ಷದಲ್ಲಿ ತಂಬಾಕು ನಿಯಂತ್ರಣದ ಕುರಿತಾಗಿ ನಡೆಸಿದ ಕಾರ್ಯಕ್ರಮಗಳ ಸಮಗ್ರ ವರದಿಯನ್ನು ಬಿಡುಗಡೆಗೊಳಿಸಿದರು. ನಂತರ ಕೊಟ್ಪಾ ಕಾಯಿದೆಯಡಿಯಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಿಸಿದ ದ.ಕ.ಜಿಲ್ಲೆಯ ವಿವಿಧ ಪೆಲೀಸ್ ಠಾಣೆಯ ಠಾಣಾಧಿಕಾರಿಗಳನ್ನು ಅಭಿನಂದಿಸಲಾಯಿತು. ಇನ್ನು ತಂಬಾಕು ನಿಯಂತ್ರಣದ ಕುರಿತಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಡೆಸಿದ ಹಲವು ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ, ದ.ಕ.ಜಿಲ್ಲಾ ಅರೋಗ್ಯಾಧಿಕಾರಿ ರಾಮಕೃಷ್ಣ ರಾವ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ವರಿದೇವಿ, ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್‍ನ ಡೀನ್ ಡಾ.ದಿಲೀಪ್ ನಾಯಕ್, ಅಖಿಲ ಭಾರತ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹಾಬಲ ಚೌಟ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ್ ಶರ್ಮ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *