Header Ads
Header Ads
Breaking News

ಮಂಗಳೂರಿನ ಬೋಳೂರಿನ ಅಮೃತ ವಿದ್ಯಾಲಯಂನಲ್ಲಿ ‘ಆರೋಹಣ-2018’-ಕ್ರೀಯೆಟ್ ಯುವರ್ ಒನ್ ಸನ್‌ಶೈನ್ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.

 

ಕಾರ್ಯಕ್ರಮವನ್ನು ಅಮೃತ ವಿದ್ಯಾಲಯಂನ ಸಂಚಾಲಕರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಅವರು ದೀಪ ಬೆಳಗಿಸಿ ಮಾತಾ ಅಮೃತಾನಂದಮಯಿ ದೇವಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ನಾವು ಎತ್ತರದಿಂದ ಜಿಗಿದಾಗ ಮಾತ್ರ ನೀರಿನ ಆಳಕ್ಕೆ ಹೋಗಲು ಸಾಧ್ಯ, ಹಾಗೆಯೇ ನಮ್ಮ ಜೀವನದಲ್ಲಯೂ ಕೂಡ ತಿಳಿದುಕೊಳ್ಳವುದು ಸಾಕಷ್ಟಿದೆ ಮತ್ತು ನಿಮ್ಮ ಗುರಿ, ನೀವು ಸಾಗುವ ದಾರಿ ಉತ್ತಮವಾಗಿದ್ದರೆ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಹೇಳಿದರು. ನಂತರ ಮುಖ್ಯ ಅಥಿತಿಯಾಗಿ ಆಗಮಿಸಿದ Z-ಬ್ಯಾಕ್ ಎಡ್ವಂಚರಸ್ ಇನ್ಟಿಟ್ಯೂಷನ್ ಪ್ರೈವೆಟ್ ಲಿಮಿಟೆಡ್‌ನ ಸ್ಥಾಪಕ ಮತ್ತು ನಿರ್ದೇಶಕ ಪ್ರಸಾದ್ ಡಿಯೋಲೆ ನಾನು ಕಳೆದ 30 ವರ್ಷಗಳಿಂದ ನಾನು ಅಮೃತ ವಿದ್ಯಾಲಯಂನ ಸಂಪರ್ಕದಲ್ಲಿದ್ದೇನೆ ಮತ್ತು ನಮ್ಮ ದೇಶ ಸಮ್ಮ ಸಂಸ್ಕೃತಿ ಮತ್ತು ಆಚಾರ ವಿಚಾರಗಳಿಗೆ ಮನ್ನಣೆ ಕೊಡುವ ಮತ್ತು ವಿದ್ಯಾರ್ಥೀಗಳ ಸರ್ವಾತೋಮುಖ ಬೆಳವಣಿಗೆಗೆ ಅಮೃತ ವಿದ್ಯಾಲಯಂ ಉತ್ತಮ ಶಾಲೆ ಎಂದರು.ಕಾರ್ಯಕ್ರಮದಲ್ಲಿ ಕಾಲೇಜಿನ ಸೀನಿಯರ್ ಪ್ರಾಂಶುಪಾಲರಾದ ರಾಮಚಂದ್ರ ಭಟ್, ಕಾರ್ಯಕ್ರಮ ಅಯೋಜಕರಾದ ಯಶ್ವಿನ್ ಧನ್‌ಪಾಲ್, ಆಯೂದ್ ಸಂಸ್ಥೆಯ ಸದಸ್ಯರು, ವಿದ್ಯಾರ್ಥಿಗಳು ಅಧ್ಯಾಪಕರು ಮತ್ತಿರರು ಉಪಸ್ಥಿತರಿದ್ದರು.

Related posts

Leave a Reply