Header Ads
Header Ads
Breaking News

ಮಂಗಳೂರಿನ ಮಾರ್ನೆಮಿಕಟ್ಟೆಯಲ್ಲಿ ಅಂಗಡಿ ಧ್ವಂಸ ಬೀದಿ ಬದಿ ವ್ಯಾಪಾರಸ್ಥರ ಅಂಗಡಿ ತೆರವು.

ನಗರದಲ್ಲಿರುವ ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇಂದು ಕಂಕನಾಡಿ ಮತ್ತು ವೆಲೆನ್ಸಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು, ಮಾರ್ನೆಮಿಕಟ್ಟೆಯಲ್ಲಿ ವಿಕಲ ಚೇತನ ವ್ಯಕ್ತಿಯೋರ್ವನ ತಳ್ಳುವ ಗಾಡಿಯನ್ನು ಮುರಿದು ಅದರಲ್ಲಿದ್ದ ಸಿಯಾಳಗಳನ್ನು ಬೀದಿಗೆ ಚೆಲ್ಲಿದ ದೃಶ್ಯ ಕಂಡು ಬಂದಿತು. ಈ ರೀತಿಯ ಅಮಾನವೀಯ ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪರಮ್‌ಶಿವಂ ಎಂಬಾತ ಕಳೆದ ಹಲವಾರು ವರುರ್ಷಗಳಿಂದ ಮಾರ್ನೆಮಿಕಟ್ಟೆ ಜಂಕ್ಷನ್‌ನಲ್ಲಿ ಸೀಯಾಳ ಮಾರುತ್ತಿದ್ದ, ವಿಕಲಚೇತನವಾಗಿರುವ ಈತನಿಗೆ ಇದೇ ಅದಾಯ ಮೂಲವಾಗಿತ್ತು. ಸ್ಥಳೀಯರು ಹೇಳುವ ಪ್ರಕಾರ ಇವನ ಗೂಡಂಗಡಿ ಪುಟ್‌ಪಾತ್‌ನಿಂದ ಬಹಳ ದೂರವೇ ಇತ್ತು. ಅದ್ರೂ ತೆರವು ಮಾಡಲಾಗಿದೆ. ಇದರ ಹಿಂದೆ ಕಾಣದ ಶಕ್ತಿ ಕೈವಾಡವಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕಾರ್ಯಾಚರಣೆ ನಡೆಸುವಾಗ ಎಲ್ಲಿರಿಗೂ ಸಮಾನ ನ್ಯಾಯ ಪಾಲಿಸಿಬೇಕಾಗಿದೆ. ಕೆಲವರಿಗೆ ಅವಕಾಶಕೊಟ್ಟು , ಇನ್ನೊಬ್ಬರಿಗೆ ನೋವು ನೀಡುವ ಕೆಲಸವನ್ನು ಪಾಲಿಕೆ ಅಧಿಕಾರಿ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯ ಆಕ್ರೋಶ ವ್ಯಕ್ತವಾಗುತ್ತಿದೆ.

Related posts

Leave a Reply