Header Ads
Breaking News

ಮಂಗಳೂರಿನ ಮಾಲ್‌ನಲ್ಲಿ ಯುವಕನ ಹಲ್ಲೆ ಪ್ರಕರಣ ಯಾವುದೇ ಕಾರಣಕ್ಕೂ ಸಮರ್ಥಿಸುವ ಪ್ರಶ್ನೆ ಇಲ್ಲ : ಯು.ಟಿ ಖಾದರ್ ಹೇಳಿಕೆ

ಮಂಗಳೂರಿನ ಮಾಲ್‌ನಲ್ಲಿ ಯುವಕನಿಗೆ ಹಲ್ಲೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಮರ್ಥಿಸುವ ಪ್ರಶ್ನೆ ಇಲ್ಲ ಅಂತಾ ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ರು. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು,ದಕ್ಷಿಣ ಕನ್ನಡ ಜಿಲ್ಲೆ ಸೌಹಾರ್ದಯುತ ಹೆಸರು ಪಡೆದುಕೊಂಡಿದೆ. ಹಾಗಾಗಿ ಎಲ್ಲರೂ ಒಗ್ಗಟ್ಟಿನಲ್ಲಿ ಹೋಗಬೇಕು.ಸಮಾಜ ಶಾಂತಿ ಕದಡಲು ಸಾಮಾಜಿಕ ಜಾಲತಾಣ ಉಪಯೋಗ ಮಾಡಬಾರದು.ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ನಿರ್ಮಾಣ ಆಗಬೇಕಾಗಿದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ನಿರ್ಮಿಸಬೇಕು. ಅಧಿಕಾರಿಗಳು ಇಂತಹ ಘಟನೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಇಂತಹ ಘಟನೆ ಆಗಬಾರದು ಇದನ್ನು ನಾನು ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ ಅಂತಾ ಹೇಳಿದ್ರು.ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್ ಅವರು ಸಿದ್ದರಾಮಯ್ಯ ಚೇಲ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಖಾದರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ರು. ಪಕ್ಷದಿಂದ ಹೊರ ಹೋದವರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದೇವೆ.
ಇಂತಹ ವಿಷಯಕ್ಕೆ ನಾವು ಮಹತ್ವ ಕೊಡುವುದಿಲ್ಲ. ನಮ್ಮಲ್ಲಿ ಹಿರಿಯ-ಕಿರಿಯರು ಒಟ್ಟಾಗಿದ್ದೇವೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಲಾಠಿ ಹಿಡಿದು ಪಥಸಂಚಲನ ಮಾಡುತ್ತಿರುವ ವಿಡಿಯೋ, ಟ್ರೋಲ್ ಆದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಖಾದರ್, ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ತಯಾರು ಮಾಡಿದ್ದೇವೆ ಅಷ್ಟೇ. ನಾನು ಹಿಂದಿನಿಂದಲೂ ಲಾಠಿ ಹಿಡಿದು ಪಥಸಂಚಲನ ಮಾಡಿದ್ದೇನೆ. ಫಿಟ್ ಆಗುದಕ್ಕೆ ನಾವು ಪಥಸಂಚಲನ ಮಾಡುದ್ರಲ್ಲಿ ತಪ್ಪು ಏನಿದೆ? ಒಂದು ಕಡೆ ಫಿಟ್ ಇಂಡಿಯಾ ಹೇಳ್ತಾರೆ, ಮತ್ತೊಂದು ಕಡೆ ಟ್ರೋಲ್ ಮಾಡ್ತಾರೆ ಅಂತಾ ಹೇಳಿದರು.

Related posts

Leave a Reply

Your email address will not be published. Required fields are marked *