Breaking News

ಮಂಗಳೂರಿನ ಮೀನುಗಾರಿಕಾ ಬಂದರು, ಬಲೆಗೆ ಬಿದ್ದ ದೈತ್ಯ ಮೀನು

ದೈತ್ಯ ಮೀನೊಂದು ಮೀನುಗಾರರ ಬಲೆಗೆ ಬಿದ್ದ ಘಟನೆ ಮಂಗಳೂರಿನ ಮೀನುಗಾರಿಕಾ ಬಂದರ್‌ನಲ್ಲಿ ನಡೆದಿದೆ.
ಇದೀಗ ಇದನ್ನು ಹೊತ್ತೊಯ್ಯುವ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಕಳೆದ ಒಂದು ವಾರದ ಹಿಂದೆ ಮಂಗಳೂರಿನ ಸಲೀಂ ಎಂಬವರ ಬೋಟ್‌ಗೆ ೯೮ ಕೆಜಿ ತೂಕದ ಮುರುಮೀನು ಎನ್ನುವ ದೈತ್ಯ ಮೀನು ಸಿಕ್ಕಿದ್ದು, ಇದನ್ನು ಬೋಟಿನಿಂದ ಕೆಳಗಿಳಿಸಿದ ಇಬ್ಬರು ಮೀನುಗಾರರು ಕಬ್ಬಿಣದ ರಾಡ್‌ನ ಮೂಲಕ ಎಳೆದುಕೊಂಡು ಬಂದಿದ್ದರು. ಈ ಅಪರೂಪದ ದೃಶ್ಯವನ್ನು ಮೀನುಗಾರರೋರ್ವರು ಚಿತ್ರೀಕರಿಸಿದ್ದು ಇದೀಗ ಈ ದೃಶ್ಯ ವೈರಲ್ ಆಗಿದೆ. ಸುಮಾರು ೨೫ ಸಾವಿರ ಬೆಲೆ ಬಾಳುವ ಈ ಮೀನು ಸಿಕ್ಕಿದ ಬೋಟ್‌ನವರಂತು ಖುಷಿಯಿಂದಲೇ ಈ ಬೃಹತ್ ಮೀನನ್ನು ಮಾರಾಟ ಮಾಡಿದ್ದಾರೆ. ಸಣ್ಣ ಗಾತ್ರದಲ್ಲಿ ಸಿಗುವ ಈ ಮುರುಮೀನನ್ನು ತಿನ್ನುವ ವಿಚಾರಲ್ಲಿ ಒಂದು ಅಥವಾ ಎರಡು ತಿನ್ನಬಹುದಾಗಿದೆ, ಆದರೆ ಈ ದೊಡ್ಡ ಗಾತ್ರದ ಮೀನಿನ ಮಾಂಸವನ್ನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಲಾಗಿದೆ.

Related posts

Leave a Reply