Header Ads
Header Ads
Breaking News

ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಅವ್ಯವಸ್ಥೆಗಳ ಆಗರ : ಬೇಜವಬ್ದಾರಿಯಿಂದ ವರ್ತಿಸುತ್ತಿರುವ ಡಾ.ಸವಿತ ತೊಲಗಿಸಬೇಕು

ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಗರ್ಭೀಣಿಯರಿಗೆ,ಬಾಣಂತಿಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಹಿಳೆಯರು ಚಳುವಣಿ ನಡೆಸಲು ಮುಂದಾಗಿದ್ದಾರೆ ನಾವು ಅವರ ಪರವಾಗಿ ಚಳುವಳಿಗೆ ಸಿದ್ಧ ಎಂದು ಇ.ಎಸ್.ಐ.ಆಸ್ಪತ್ರೆ ಮಂಗಳೂರು ಇದರ ಕುಂದು ಕೊರತೆ ಸಮಿತಿಯ ಸದಸ್ಯ ಸುದತ್ತ ಜೈನ್ ಶಿರ್ತಾಡಿ ಹೇಳಿದರು.

ಇವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ.ಈ ಆಸ್ಪತ್ರೆಯಲ್ಲಿ ನೊಂದವರು ಅನೇಕ ಮಂದಿ ಇದ್ದಾರೆ, ಬಾಣಂತಿಗೆ ನೀರು ಇಲ್ಲ,ಸರಿಯಾದ ಸೌಲಭ್ಯಗಳಿಲ್ಲ.ಆದರೇ ಅಲ್ಲಿನ ಡಾ.ಸವಿತಾ ರವರು ನಮಗೆ ಯಾವುದೇ ಮಾಹಿತಿಯಿಲ್ಲ ಎಂದು ಬೇಜವಬ್ದಾರಿಯಿಂದ ಉತ್ತರಿಸುತ್ತಿದ್ದಾರೆ,ಇಂತಹಾ ವೈಧ್ಯರನ್ನು ಇಲ್ಲಿಂದ ತೊಲಗಿಸಬೇಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರು ಉತ್ತಮ ಸಮಾಜಕ್ಕಾಗಿ ಮತ್ತು ನೊಂದ ಮಹಿಳೆಯರ ಪರ ದ್ವನಿಯಾಗಬೇಕು ಎಂದು ಹೇಳಿದರು.
ಈ ಸಂದರ್ಭ ಶ್ರೀರಾಮ ಸೇನೆ, ಮಂಗಳೂರು ಇದರ ನಗರಾಧ್ಯಕ್ಷ ಚಂದ್ರಶೇಖರ್,ದಕ್ಷಿಣ ಕನ್ನಡ ಜಿಲ್ಲಾ ಅಖಿಲ ಭಾರತ ಕಾರ್ಮಿಕ ಸಂಘದ ಅಧ್ಯಕ್ಷ ಸಂತೋಷ್ ಕಾವೂರು,ಸುವರ್ಣ ಕರ್ನಾಟಕ ಜನಸ್ನೇಹಿ ಸಂಘಟನೆಯ ಕಾರ್ಯದರ್ಶಿ ಎನ್.ಕೆ.ಪೈ, ಓಂ ಶ್ರೀ ದುರ್ಗಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅನಿತಾ ಜೈನ್ ಶಿರ್ತಾಡಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply