Header Ads
Breaking News

ಮಂಗಳೂರಿನ ವಸತಿ ಸಮುಚ್ಚಯಗಳಲ್ಲಿ ಮಡಿಕೆ ಕಾಂಪೋಸ್ಟ್ ; ರಾಮಕೃಷ್ಣ ಮಿಷನ್ ಬೆಂಬಲ

ಕಳೆದ ಅನೇಕ ವರ್ಷಗಳಿಂದ ಸ್ವಚ್ಛತಾ ಅಭಿಯಾನದ ಮೂಲಕ ಜಾಗೃತಿ ಮೂಡಿಸಿರುವ ರಾಮಕೃಷ್ಣ ಮಿಷನ್ ಹಸಿಕಸ ವಿಲೇವಾರಿಗೆ ಮುಂದಾಗಿದೆ. ಹಸಿಕಸ ನಿರ್ವಹಣೆಗೆಂದು ನಗರದ ನಾಲ್ಕು ಸಾವಿರಕ್ಕೂ ಅಧಿಕ ಮನೆಗಳಿಗೆ ಈಗಾಗಲೇ ಮಡಿಕೆ ಕಾಂಪೋಸ್ಟ್ ನೀಡಲಾಗಿದ್ದು ಈ ಯೋಜನೆಯನ್ನು ಮಠದ ಮಾರ್ಗದರ್ಶನದಲ್ಲಿ ವಸತಿ ಸಮುಚ್ಚಯಗಳಲ್ಲೂ ಅಳವಡಿಸಲಾಗುತ್ತಿದೆ. ಇಂದು ನಗರದ ವಿವಿಧ ವಸತಿ ಸಮುಚ್ಚಯಗಳಲ್ಲಿ ಮಡಕೆ ಕಾಂಪೋಸ್ಟ್‍ಗೆ ಚಾಲನೆ ನೀಡಲಾಯಿತು.

ನಗರದ ಮನೆ ಮನೆಗಳಲ್ಲಿ ಹಸಿ ಕಸ ಒಣ ಕಸ ವಿಂಗಡಣೆ ಮಾಡುವಂತೆ ಮಹಾನಗರ ಪಾಲಿಕೆ ಕಟ್ಟುನಿಟ್ಟಾದ ನಿಯಮ ಜಾರಿಗೆ ತಂದಿದ್ದು ಈ ನಿಯಮ ಪಾಲಿಸದವರ ಮೇಲೆ ದಂಡ ವಿಧಿಸಲಾಗುತ್ತಿದೆ.ಇದೀಗ ವಸತಿ ಸಮುಚ್ಚಯಗಳಲ್ಲಿ ವಿನೂತನ ಕಸ ವಿಂಗಡಣಾ ಕ್ರಮ ಅನುಷ್ಠಾನ ಮಾಡಲು ಈಗಾಲೇ ಚಿಂತಿಸಲಾಗಿದೆ. ಹಲವಾರು ವರ್ಷಗಳಿಂದ ರಾಮಕೃಷ್ಣ ಮಿಶನ್ ಸ್ವಚ್ಚತ ಅಭಿಯಾನದ ಮುಖಾಂತರ ಸ್ವಚ್ಚತೆಗೆ ಜಾಗೃತಿ ಮೂಡಿಸಿದ್ದು ಇದೀಗ ಹಸಿ ಕಸ ವಿಲೇವಾರಿಗೆ ಮುಂದಾಗಿದೆ. ಸ್ವಚ್ಚಮಂಗಳೂರು ತಂಡದ ಸದಸ್ಯರುಗಳು ರಾಮಕೃಷ್ಣ ಮಠದ ಮಾರ್ಗದರ್ಶನದಲ್ಲಿ ಕಸ ವಿಲೇವಾರಿಯನ್ನು ಸ್ಮಾರ್ಟ್‍ಆಪ್ ಯೋಜನೆ ಮೂಲಕ ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.

ನಮ್ಮ ತ್ಯಾಜ್ಯ ನಮ್ಮ ಹೊಣೆ ಘೋಷವಾಕ್ಯದೊಂದಿಗೆ ಮಂಗಳೂರಿನ ಇನ್‍ಲ್ಯಾಂಡ್ ಅಪರ್ಟ್‍ಮೆಂಟ್‍ನಲ್ಲಿ ಮಹಾನಗರ ಪಾಲಿಕೆ ಹಾಗೂ ರಾಮಕೃಷ್ಣ ಮಿಶನ್ ವತಿಯಿಂದ ಮಡಿಕೆ ಕಾಂಪೋಸ್ಟ್‍ಗಳಿಗೆ ತ್ಯಾಜ್ಯಗಳನ್ನು ಹಾಕುವ ಮೂಲಕ ತ್ಯಾಜ್ಯ ವಿಲೇವಾರಿಗೆ ಚಾಲನೆ ನೀಡಿಲಾಯಿತು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಂಗಳೂರು ಮಹಾನಗರ ಪಾಲಿಕೆಯ ಕಮಿಷ್‍ನರ್ ಅಕ್ಷಯ್ ಶ್ರೀಧರ್ ಅವರು ಮಾತನಾಡಿ, ಮಂಗಳೂರಿನಲ್ಲಿ ಸ್ವಚ್ಚತಾ ಕಾರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಿದೆ. ಈ ಸ್ವಚ್ಚತಾ ಕಾರ್ಯ ಮಂಗಳೂರಿನಲ್ಲಿ ಆಗದಿದ್ದರೆ ಬೇರೆ ಎಲ್ಲಿಯೂ ಅಗಲು ಸಾಧ್ಯವಿಲ್ಲ. ಮಂಗಳೂರು ನಗರ ಬೇರೆಲ್ಲಾ ನಗರಗಳಿಗೆ ಮಾದರಿಯಾಗಬೇಕು. ಈ ಕಾರ್ಯಕ್ಕೆ ಪ್ರೇರಣೆಯಾಗಿ ಮಹಾನಗರ ಪಾಲಿಕೆಯಿಂದ ನಾವು ಯಾವಾಗಲೂ ಸಿದ್ಧರಿದ್ದೇವೆ ಎಂದು ಹೇಳಿದರು.

ಆನಂತರ ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಮಾತನಾಡಿ, ಇಡೀ ಜಗತ್ತಿನಲ್ಲಿ ಮೊದಲ ಬಾರಿಗೆ ಮಡಿಕೆ ಕಾಂಪೋಸ್ಟ್‍ನ್ನು ಜಾರಿಗೆ ತರಲಾಗಿದೆ, ಮಂಗಳೂರು ನಗರದ ಕಸ ನಿರ್ವಹಣೆಗಾಗಿ ಇದೊಂದು ಹೊಸತನದ ಯೋಜನೆ ಇದಾಗಿದೆ. ಮಂಗಳೂರಿನಲ್ಲಿ ಬೇರೆ ಬೇರೆ ಸಮಸ್ಯೆಗಳಿವೆ ಅದರಲ್ಲಿ ಕಸ ವಿಲೇವಾರಿ ಸಮಸ್ಯೆಯು ಒಂದು ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮಡಿಕೆ ಕಾಂಪೋಸ್ಟ್ ಅಳವಡಿಸುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭ ಮಂಗಳೂರು ಸ್ವಚ್ಛತಾ ಅಭಿಯಾನದ ಸಂಯೋಜಕರಾದ ರಂಜನ್, ದಿಲ್‍ರಾಜ್ ಆಳ್ವಾ, ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ಹಸಿಕಸ ವಿಲೇವಾರಿಗೆ ಇದೊಂದು ವಿನೂತನ ಹೆಜ್ಜೆ ಎಂಬಂತೆ ರಾಮೃಷ್ಣ ಮಿಷನ್‍ನವರು ಮೂರು ಮಣ್ಣಿನ ಮಡಿಕೆಗಳನ್ನು ಕೊಡುತ್ತಾರೆ. ಕೆಳ ಭಾಗದ ಮಡಿಕೆಯ ಮೇಲೆ ಎರಡು ಮಡಿಕೆಗಳನ್ನು ಇಡಲಾಗುತ್ತದೆ. ಮೇಲಿನ ಮಡಿಕೆಯಲ್ಲಿ ನೀರು ರಹಿತ ಹಸಿ ಕಸಗಳನ್ನು ಹಾಕಬೇಕು. ಅದರ ಮೇಲೆ ತೆಂಗಿನ ನಾರು ಅಥವಾ ಮಡಿಕೆಯೊಂದಿಗೆ ನೀಡಿದ ಕಾಂಪೋಸ್ಟ್ ಪೌಡರನ್ನು ಹಾಕಬೇಕು. ಮೇಲಿನ ಮಡಿಕೆ ತುಂಬಿದಾಗ ಅದನ್ನು ತೆಗೆದು ಕೊನೆಯ ಮಡಿಕೆಗೆ ಹಾಕಬೇಕು. ಮತ್ತೆ ಎರಡನೇ ಮಡಿಕೆ ಮೇಲೆ ಇಟ್ಟು ಅದಕ್ಕೆ ಹಸಿಕಸ ಹಾಕಬೇಕು ಹೀಗೆ ಮನೆಯ ಹಸಿ ತ್ಯಾಜ್ಯದಿಂದಲೇ ಗೊಬ್ಬರ ತಯಾರಾಗುತ್ತದೆ. ಈ ವಿನೂತನ ಹೆಜ್ಜೆಗೆ ಮಂಗಳೂರು ಪಾಲಿಕೆ ಕೂಡ ಕೈ ಜೋಡಿಸಿದ್ದು, ಮುಂದಿನ ದಿನಗಳಲ್ಲಿ ನೂತನ ಪ್ರಯೋಗ ಯಶಸ್ವಿಯಾಗಲಿ ಎಂಬುವುದೇ ವಿ4 ನ್ಯೂಸ್‍ನ ಆಶಯ

Related posts

Leave a Reply

Your email address will not be published. Required fields are marked *