Header Ads
Header Ads
Breaking News

ಮಂಗಳೂರಿನ ಶ್ರೀನಿವಾಸ್ ಯುನಿವರ್ಸಿಟಿಯಲಿ ಜುಲೈ 27ರಂದು ಉದ್ಯೋಗ ಮೇಳ – 2019

ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ್ ಯುನಿವರ್ಸಿಟಿ ಮತ್ತು ಶ್ರೀನಿವಾಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ವತಿಯಿಂದ ಜುಲೈ 28ರಂದು ಪಾಂಡೇಶ್ವರದ ಶ್ರೀನಿವಾಸ್ ಗ್ಯಾಲರಿ ಹಾಲ್‌ನಲ್ಲಿ ಉದ್ಯೋಗ ಮೇಳ 2019 ನಡೆಯಲಿದೆ ಎಂದು ಶ್ರೀನಿವಾಸ್ ಕಾಲೇಜಿನ ಡಿಪಾರ್ಟ್‌ಮೆಂಟ್ ರಿಜಿಸ್ಟ್ರಾರ್ ಪ್ರೊ.ಅಂಕಿತ್ ಹೇಳಿದರು.
ಅವರು ಮಂಗಳೂರಿನ ಶ್ರೀನಿವಾಸ್ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉದ್ಯೋಗ ಮೇಳದಲ್ಲಿ ಒಟ್ಟು 80 ಕಂಪೆನಿಗಳು ಭಾಗವಹಿಸಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸದವಕಾಶ ಎಂದು ಹೇಳಿದ್ರು.
ಕಾರ್ಯಕ್ರಮದಲ್ಲಿ ಪ್ಲೇಸ್‌ಮೆಂಟ್ ಆಫೀಸರ್ ಪ್ರೊ. ವರುಣ್ ಶೆಣೈ, ಉದ್ಯೋಗ ಮೇಳ-೨೦೧೯ರ ಬ್ರೋಚರ್ ಬಿಡುಗಡೆ ಮಾಡಿದ್ರು. ಬಳಿಕ ಶ್ರೀನಿವಾಸ್ ಕಾಲೇಜಿನ ಕನ್ವೀನರ್ ಡಾ. ಅಜಯ್ ಕುಮಾರ್ ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸೋದ್ರಿಂದ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಸಹಾಕಾರಿಯಾಗುತ್ತೆ ಅನ್ನೋದ್ರ ಬಗ್ಗೆ ಮಾಹಿತಿ ನೀಡಿದ್ರು.
ಇನ್ನು ಕಾಲೇಜಿನ ಉಪಕುಲಪತಿ ಡಾ. ಪಿಎಸ್ ಐತಾಳ್ ಮಾತನಾಡಿ, ಉದ್ಯೋಗ ಮೇಳಕ್ಕೆ ವಿದ್ಯಾರ್ಥಿಗಳು ಭಾಗವಹಿಸೋದ್ರಿಂದ ಉದ್ಯೋಗ ಲಭಿಸೋದು ಮಾತ್ರವಲ್ಲದೆ, ಈಗಾಗಲೇ ಕಲಿತಾ ಇರೋ ವಿದ್ಯಾರ್ಥಿಗಳಿಗೆ ಪಾರ್ಟ್ ಟೈಮ್ ಜಾಬ್ ಕೂಡಾ ಮಾಡಲು ಅವಕಾಶವಿದೆ ಎಂದ್ರು. ಈ ಸಂದರ್ಭ ಶ್ರೀನಿವಾಸ್ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಡಾ. ಅನಿಲ್ ಕುಮಾರ್, ಡಾ. ಶ್ರೀನಿವಾಸ್ ಮಯ್ಯ, ಅಣ್ಣಪ್ಪ, ಹಾಗೂ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *