Header Ads
Breaking News

ಮಂಗಳೂರಿನ ಶ್ರೀನಿವಾಸ್ ವಿವಿ ವತಿಯಿಂದ ಸ್ಫೋಟ್ರ್ಸ್ ಮೀಟ್ : ಪಾಂಡೇಶ್ವರದ ಪೊಲೀಸ್ ಮೈದಾನದಲ್ಲಿ ನಡೆದ ಕ್ರೀಡಾಕೂಟ

ಮಂಗಳೂರಿನ ಶ್ರೀನಿವಾಸ ಯುನಿರ್ಸಿಟಿಯ ವಾರ್ಷಿಕ ಕ್ರೀಡೋತ್ಸವವು ಪಾಂಡೇಶ್ವರದ ಪೊಲೀಸ್ ಮೈದಾನದಲ್ಲಿ ನಡೆಯಿತು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚನ ನಡೆಯಿತು.ಮಂಗಳೂರಿನ ಪಾಂಡೇಶ್ವರದ ಪೊಲೀಸ್ ಮೈದಾನದಲ್ಲಿ ಶ್ರೀನಿವಾಸ ವಿಶ್ವವಿದ್ಯಾನಿಲಯದ ವಾರ್ಷಿಕ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟವನ್ನು ಶ್ರೀನಿವಾಸ ಯುನಿವರ್ಸಿಟಿಯ ಆಡಳಿತ ಮಂಡಳಿಯ ಸದಸ್ಯರಾದ ಸುಧಾಕರ ಜೋಶಿ ಅವರು ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಗಣ್ಯರು ಪಥ ಸಂಚನದ ಗೌರವ ವಂದನೆ ಸ್ವೀಕರಿಸಿದರು. ರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್ ಪ್ರಶಸ್ತಿ ವಿಜೇತೆ ಶಿರಿನ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಇದೇ ವೇಳೆ ಶ್ರೀನಿವಾಸ ಯುನಿವರ್ಸಿಟಿಯ ಆಡಳಿತ ಮಂಡಳಿಯ ಸದಸ್ಯರಾದ ಸುಧಾಕರ ಜೋಶಿ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಕ್ರೀಡೆ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ದೈಹಿಕ ಶಿಕ್ಷಣದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಆನಂತರ ಎ. ಶಾಮರಾವ್ ಪೌಂಡೇಶನ್‍ನ ಉಪಾಧ್ಯಕ್ಷರಾದ ಮತ್ತು ಶ್ರೀನಿವಾಸ ಯುನಿವರ್ಸಿಟಿಯ ಪ್ರೊ. ಚಾನ್ಸಲರ್ ಡಾ. ಎ. ಶ್ರೀನಿವಾಸ್ ರಾವ್ ಮಾತನಾಡಿ, ವಾರ್ಷಿಕ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳೆಲ್ಲರು ಭಾಗವಹಿಸಬೇಕು ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಈ ಸಂದರ್ಭ ಶ್ರೀನಿವಾಸ ಯುನಿವರ್ಸಿಟಿಯ ವಯ್ಸ್ ಚಾನ್ಸಲರ್ ಡಾ. ಪಿ.ಎಸ್. ಐತಾಳ್, ಎಸ್‍ಸಿಹೆಚ್‍ಎಮ್‍ನ ಡೀನ್ ಪ್ರೊ. ಸ್ವಾಮಿನಾಥನ್ ಎಸ್., ಎಸ್‍ಸಿಪಿಟಿ ಯ ಡೀನ್ ಡಾ. ಎಸ್. ರಾಜಶೇಖರ್, ಎಸ್.ಇಡಿ ಡೀನ್ ಡಾ. ಜಯಶ್ರಿ ಕೆ., ಫಿಸಿಕಲ್ ಡೈರೆಕರ್ ಸುಪ್ರಿಯಾ ಅಡಿಗ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *