Header Ads
Header Ads
Breaking News

ಮಂಗಳೂರಿನ ಶ್ರೀನಿವಾಸ ಯುನಿವರ್ಸಿಟಿಯಲ್ಲಿ ಸಾಗಾ-2ಕೆ19

ಮಂಗಳೂರಿನ ಶ್ರೀನಿವಾಸ್ ಯುನಿವರ್ಸಿಟಿಯ ಕಾಲೇಜ್ ಆಪ್ ಹೋಟೆಲ್ ಮ್ಯಾನೇಜ್ ಮೆಂಟ್ ಮತ್ತು ಟೂರಿಸಂ ವತಿಯಿಂದ ಕಾಲೇಜಿನ ಕ್ಯಾಂಪಸ್ ನಲ್ಲಿ ಪಿಯು ಮಟ್ಟದ ವಿದ್ಯಾರ್ಥಿಗಳಿಗಾಗಿ ಸಾಗಾ-2ಕೆ 19 ಅಂಗವಾಗಿ ಕುಕ್ಕಿಂಗ್ ವಿದ್ ಔಟ್ ಫೈಯರ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಶ್ರೀನಿವಾಸ್ ಕಾಲೇಜಿನ ಕ್ಯಾಂಪಸ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳಿಂದ ಸುಮಾರು ೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ತಮಗೆ ಗೊತ್ತಿರುವ ತಿಂಡಿಗಳನ್ನು ತಮ್ಮ ತಂಡದ ಜೊತೆಗೂಡಿ ಅಚ್ಚುಕಟ್ಟಾಗಿ ಮಾಡಿ ಪ್ರದರ್ಶನಕ್ಕಿಟ್ಟರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮಂಗಳೂರಿನ ಮಹೇಶ್ ಪಿಯು ಕಾಲೇಜಿನ ಭೂಮಿಕಾ ಮತ್ತು ಧನುಶ್ರಿ, ದ್ವಿತೀಯ ಬಹುಮಾನವನ್ನು ಮಂಗಳೂರಿನ ರೊಸಾರಿಯೊ ಪಿಯು ಕಾಲೇಜಿನ ಅಬ್ದುಲ್ ಸಜೀಮ್ ಮತ್ತು ಅಕೀಫ್ ಇಬ್ರಾಹಿಂ, ಮೂರನೇ ಬಹುಮಾನವನ್ನು ಅಮೃತಾ ತಮ್ಮದಾಗಿಸಿಕೊಂಡರು.
ಉಡುಪಿಯ ಎಂಜಿಎಂ ಕಾಲೇಜಿನ ಎಂ.ಎಸ್. ನಿಶಾ, ಮಂಗಳೂರಿನ ಮಹೇಶ್ ಪಿಯು ಕಾಲೇಜು, ಮಂಗಳೂರಿನ ಶಾರದಾ ಪಿಯು ಕಾಲೇಜು ಮತ್ತು ಮಂಗಳೂರಿನ ಮಹೇಶ್ ಪಿಯು ಕಾಲೇಜಿಗೆ ಕ್ರಮವಾಗಿ ಅತ್ಯುತ್ತಮ ಸಿಹಿತಿಂಡಿ, ಅತ್ಯುತ್ತಮ ಮೋಕ್ ಟಾಲ್ ಪ್ರಶಸ್ತಿ ಗಳನ್ನು ನೀಡಲಾಯಿತು.
ಒಟ್ಟಾರೆ ಸಾಧನೆಗಾಗಿ ಗಣಪತಿ ಪಿಯು ಕಾಲೇಜಿಗೆ ವಿಶೇ? ಬಹುಮಾನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀನಿವಾಸ್ ಹೋಟೆಲ್ ಮ್ಯಾನೇಜ್ಮೆಂಟ್ ನ ಮತ್ತು ಟೂರಿಸಮ್ ನ ಡೀನ್ ಸ್ವಾಮಿನಾಥನ್,ಕಾರ್ಯಕ್ರಮದ ಸಂಯೋಜಕತಾದ ಸುಜಾತ ಶಂಕರ್,ವಿದ್ಯಾರ್ಥಿ ಪರಿತ್ ನ ಅಧ್ಯಕ್ಷ ಶ್ರೀನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *