Header Ads
Header Ads
Breaking News

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು 2018-19ನೇ ಸಾಲಿನ ವಿದ್ಯಾರ್ಥಿ ಕೌನ್ಸಿಲ್‌ನ ಉದ್ಘಾಟನೆ

ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ 2018-19 ನೇ ಸಾಲಿನ ಸ್ಟುಡೆಂಟ್ ಕೌನ್ಸಿಲ್ ನ ಉದ್ಘಾಟನೆಯು ಕಾಲೇಜಿನ ಲೊಯೋಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮುಖ್ಯಸ್ಥರಾದ ಡಾ ಕೃಪಾ ಅಮರ್ ಆಳ್ವಾ ಅವರು ಉದ್ಘಾಟಿಸಿರು. ನಂತರ ಮಾತನಾಡಿದ ಅವರು ನಾಯಕನು ನಮ್ಮೊಳಗೆ ಇರುತ್ತಾನೆ. ನಾಯಕರು ಭಿನ್ನವಾಗಿ ಕೆಲಸ ಮಾಡುವವರು ಈ ಭಿನ್ನತೆ ನಮ್ಮನ್ನು ನಾಯಕನನ್ನಾಗಿ ಮಾಡುತ್ತದೆ ಎಂದರು.

   

ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಐಎಂಐಟಿಯ ನಿರ್ಧೇಶಕರಾದ ರೆವರೆಂಡ್ ಫಾಧರ್ ಡೆನ್ಸಿಲ್ ಲೊಬೊ ಎಸ್‌ಜೆ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ದೇಶದ ನಾಯಕರು ನಾವು ಅಂತರ ರಾಷ್ಟ್ರೀಯ ಮಟ್ಟದಲ್ಲಿ ನೋಡಲು ಬಯಸುತ್ತೇವೆ. ಯಾವುದೇ ಒಂದು ಕೆಲಸ ಮಾಡುವಾಗ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ನಾಯಕ ಪ್ರದ್ಯುಮ್ನ್ ರೈ, ಕಾರ್ಯದರ್ಶಿ ಮೆಕ್ ಪಿಂಟೋ, ಜತೆ ಕಾರ್ಯದರ್ಶಿ ಜ್ಯೋಯಿಸಿ ಪಿಂಟೋರವರಿಗೆ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಫಾದರ್ ಮೆಲ್ವಿನ್ ಮೆಂಡೋನ್ಸಎಸ್‌ಜೆ ಪ್ರಮಾಣ ವಚನ ಭೋದಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಶೆರ್ಲೆಟ್ ಡಿಸೋಜ ಹಾಗೂ ಮುರಳೀಕೃಷ್ಣ ಜಿ ಎಂ ಉಪಸ್ಥಿತರಿದ್ದರು.

Related posts

Leave a Reply