Header Ads
Header Ads
Breaking News

ಮಂಗಳೂರಿನ ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಕೇಂದ್ರದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಿತು.

ಮಂಗಳೂರಿನ ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಕೇಂದ್ರದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮತ್ತು ಬೀಳ್ಕೊಡುಗೆ ಸಮಾರಂಭ ನಡೆಯಿತು.ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಮತ್ತು ನಾವು ಈ ಹಂತದಲ್ಲಿ ಏನು ಕಲಿತುಕೊಳ್ಳುತ್ತೆವೆಯೋ ಅದು ನಮ್ಮ ಜೀವನವನ್ನು ನಿರ್ಧರಿಸುತ್ತದೆ. ಎನ್ನುವ ಮಾತು ಅಕ್ಷರಸಹ ಸತ್ಯ. ಕಾಲೇಜಿನ ಕೆಲವು ವರ್ಷಗಳ ಕಾಲ ಕಳೆದ ನೆನಪಿನ ಭುತ್ತಿಯನ್ನು ಎತ್ತಿಕೊಂಡು ಹೋಗುವ, ಮತ್ತು ಸಂತೋಷ ಮತ್ತು ದುಖ: ಒಟ್ಟಿಗೆ ತರಿಸುವ ಒಂದು ಅದ್ಭುತ ಕ್ಷಣ..! ಈ ಸಂದರ್ಭ ಕಾಲೇಜಿನಿಂದ ತೆರಳುವ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ ಕರ್ನಾಟಕ ರಾಜ್ಯ ನಗರಾಭಿವೃದ್ದಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಟೆಕ್ನಿಕಲ್ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾನವ ಸಂಪನ್ಮೂಲ ಬಳಕೆಯಲ್ಲಿ ವಿಶ್ವದಲ್ಲಿಯೇ ಭಾರತ ಒಂದನೇ ಸ್ಥಾನದಲ್ಲಿದೆ ಇದು ನಮಗೆ ಹೆಮ್ಮೆಯ ವಿಷಯ ನೀವು ಈ ನಿಟ್ಟಿನಲ್ಲಿ ಸಮಾಜಕ್ಕೆ ಏನದರೂ ಒಳಿತು ಮಾಡಬೇಕು ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ನಂತರ ಮುಖ್ಯ ಅಥಿತಿಯಾಗಿ ಆಗಮಿಸಿದ ವಿ.ಟಿ.ಯು.ನ ಮಾಜಿ ಸ್ಪೆಷಲ್ ಪ್ಲೇಸ್‌ಮೆಂಟ್ ಆಫಿಸರ್ ಜಿವೋ ಡಿ’ಸಿಲ್ವಾ ಮಾತನಾಡಿ ಒಂದು ಹೆಣ್ಣು ದೊಡ್ಡವಳಾದ ಮೇಲೆ ಹೇಗೆ ತನ್ನ ತಾಯಿ ಮತ್ತು ತವರು ಮನೆಯನ್ನು ಬಿಟ್ಟು ಹೋಗುತ್ತಾಳೋ ಹಾಗೆಯೇ ವಿದ್ಯಾರ್ಥಿಗಳಾದ ನೀವು ಕೂಡ ಕಾಲೇಜು ಬಿಟ್ಟು ನಿಮ್ಮ ಮುಂದಿನ ಭವಿಷ್ಯದ ಕಡೆ ಮುಖ ಮಾಡಿ ಹೆಜ್ಜೆ ಇಡುವವರಿದ್ದೀರಿ.ಇನ್ನು ನಿಮ್ಮ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಕಿವಿ ಮಾತು ಹೇಳಿದರು.ಈ ವೇಳೆ ಕರ್ನಾಟಕ ರಾಜ್ಯ ನಗರಾಭಿವೃದ್ದಿ ಮತ್ತು ವಸತಿ ಸಚಿವ ಮತ್ತು ಸಂತ ಆಲೋಶಿಯಸ್ ಕಾಲೇಜಿನ ಹಳೆಯ ವಿದ್ಯಾರ್ಥಿ ಎಂಬ ನೆಲೆಯಲ್ಲಿ ಯು.ಟಿ.ಖಾದರ್‌ರವರನ್ನ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸ್ಕಿಪ್‌ನ ಜನರಲ್ ಸೆಕ್ರೇಟ್ರಿ ಡಾ.ಸ್ಟೇನ್ಲಿ ಜೋಸೆಫ್, ಜಾಗ್ವಾರ್ ಪೌಂಡೇಷನ್‌ನ ಕರ್ನಾಟಕ ಏರಿಯಾ ಸರ್ವಿಸ್ ಇನ್ ಚಾರ್ಜ್ ಅನೂಪ್ ಅನ್ನಿಗೇರಿ,ಸಂತ ಅಲೋಶಿಯಸ್ ವಿದ್ಯಾ ಸಂಸ್ಥೆಗಳ ರೆಕ್ಟರ್ ರೇವರೆಂಡ್ ಫಾದರ್ ಡೈನೀಶಿಯಸ್ ವಾಝ್.ಎಸ್.ಜೆ, ಸಂತ ಅಲೋಶಿಯಸ್ ವಿದ್ಯಾ ಸಂಸ್ಥೆಗಳ ನಿರ್ದೇಶಕ ರೇವರೆಂಡ್ ಪಾದರ್ ಎರಿಕ್ ಮಾತಿಸ್ ಎಸ್.ಜೆ, ಸಂತ ಅಲೋಶಿಯಸ್ ಕೈಗಾರಿಕ ತರಬೇತಿ ಕಾಲೇಜಿನ ಪ್ರಾಂಶುಪಾಲರಾದ ವಿನ್‌ಸೆಂಟ್ ಮೆಂಡೋನ್ಸಾ, ಕಾರ್ಯಕ್ರಮ ಸಂಯೋಜಕರಾದ ಡೈನಾ ಫೆರ್ನಾಂಡೀಸ್, ವಿದ್ಯಾರ್ಥಿಗಳು,ಅದ್ಯಾಪಕರು,ಪೋಷಕರು ಮತ್ತಿತರರು ಉಪಸ್ತಿತರಿದ್ದರು.

Related posts

Leave a Reply