Header Ads
Header Ads
Breaking News

ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲಾ ಶಿಕ್ಷಕ-ರಕ್ಷರ ಸಂಘದ ವಾರ್ಷಿಕ ಮಹಾಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು.ನಗರದ ಕೊಡಿಯಲ್ ಬೈಲ್ ನಲ್ಲಿರುವ ಸಂತ ಅಲೋಶಿಯಸ್ ಪ್ರೌಢಶಾಲಾ ಶಿಕ್ಷಕ- ರಕ್ಷರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.ಇನ್ನು ಕಳೆದ ಶೈಕ್ಷಣಿಕ ವರ್ಷ ದ ಎಸ್.ಎಲ್.ಎಸ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿಗಳನ್ನು ಗಣ್ಯರು ಗೌರವಿಸಿದ್ರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಸಂಸ್ಥೆ ಯ ರೆಕ್ಟರ್ ರೇ.ಫಾದರ್ ಡಯನೀಶಿಯಸ್ ವಾಸ್ ಎಸ್.ಜೆ ವಹಿಸಿ, ಮಾತನಾಡಿದರು. ಅತ್ಯುತ್ತಮ ಸಂಸ್ಥೆಯಾಗಿ ರೂಪುಗೊಂಡಿದೆ.

ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳಲ್ಲಿ ಇದ್ದಾರೆ ಎಂದು ಹೇಳಲು ಹೆಮ್ಮೆ ಯಾಗುತ್ತಿದೆ ಅಂತಾ ಹೇಳಿದರು .ಇನ್ನು ಶಾಲಾ ಹೆಡ್ ಮಾಸ್ಟರ್ ರೇ.ಫಾದರ್ ಜೆರಾಲ್ಡ್ ಫುರ್ಟಾಡೋ ಎಸ್.ಜೆ ಮಾತನಾಡಿ, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅತ್ಯತ್ತಮ ಬೋಧಕರು ವರ್ಗ ಹೊಂದಿದ್ದು,ಅಲ್ಲದೇ ವಿದ್ಯಾರ್ಥಿಗಳ ಕೂಡ ಕಲಿಕೆಯಲ್ಲಿ ತೊಡಿಸಿಕೊಳ್ಳುತ್ತಿದ್ದಾರೆ ಅಂತಾ ಹೇಳಿದರು.ಇದೇ ವೇಳೆ ಕಳೆದ ಹಲವಾರು ವರ್ಷ ಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುತ್ತಿರುವ ಹೆರಾಲ್ಡ್ ಮಿಸ್ಕಿತ್ ಅವರನ್ನು ಗಣ್ಯರು ಸನ್ಮಾನಿಸಿದ್ರು.ಇನ್ನು ಶಿಕ್ಷಕ ರಕ್ಷಕ ಸಂಘದ ನಿರ್ಗಮನ ಉಪಾಧ್ಯಕ್ಷ ರಾದ ಭಾಸ್ಕರ್ ಕಿರಣ್ ಅವರನ್ನು ಕೂಡ ಗೌರವಿಸಲಾಯ್ತು.ಈ ವೇಳೆ ಶಾಲಾ ಉಪಮುಖ್ಯೋಪಾಧ್ಯರಾದ ಗೋಪಾಲ ಕೃಷ್ಣಾ ಎಸ್. ನೂತನ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರಾದ ಮಹೇಶ್ ನಾಯಕ್, ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಪ್ರವೀಣ್ ಲೋಬೋ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply