Header Ads
Breaking News

ಮಂಗಳೂರಿನ ಸಂತ ತೆರೆಜಾ ಚರ್ಚ್ ಪಾಲ್ಬನೆಯಲ್ಲಿ 17 ಮಂದಿ ಮಕ್ಕಳಿಗೆ ಕ್ರೈಸ್ತ ಪ್ರಸಾದ

ಮಂಗಳೂರಿನ ಸಂತ ತೆರೆಜಾ ಚರ್ಚ್ ಪಾಲ್ಬನೆಯಲ್ಲಿ ಚರ್ಚಿನ ವ್ಯಾಪ್ತಿಯಲ್ಲಿ ಇರುವ 17 ಮಂದಿ ಮಕ್ಕಳಿಗೆ ಪ್ರಥಮವಾಗಿ ಕ್ರೈಸ್ತ ಪ್ರಸಾದವನ್ನು ನೀಡಲಾಯಿತು. ಬಲಿಪೂಜೆಯ ನೇತೃತ್ವವನ್ನು ಚರ್ಚಿನ ಧರ್ಮಗುರುಗಳಾದ ವಂದನೀಯ ಆಲ್ಬನ್ ಡಿ ಸೋಜಾ ವಹಿಸಿದ್ದರು. ಪ್ರವಚನವನ್ನು ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಇದರ ಆಡಳಿತಾಧಿಕಾರಿ ವಂದನೀಯ ಸಿಲ್ಪೆಸ್ಟರ್ ಡಿ ಕೋಸ್ತ ನೇರವೇರಿಸಿದ್ರು. ಈ ಸಂದರ್ಭ ಬಲಿಪೂಜೆಯ ಸಹಭಾಗಿತ್ವವನ್ನು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ವಂದನೀಯ ಡಾ. ವಿಲ್ಫೆರ್ಡ್ ಪ್ರಕಾಶ ಡಿಸೋಜಾ, ಫಾ ರೋಹಿತ್ ಡಿ ಕೋಸ್ತಾ, ಫಾ ದೀಪಕ್ ಅವರು ವಹಿಸಿದ್ದರು. ಮಕ್ಕಳಿಗೆ ತರಬೇತಿ ನೀಡಿದ ಸೋನಲ್ ಪಿಂಟೋ, ಚರ್ಚಿನ ಉಪಾಧ್ಯಕ್ಷ ವಿಲಿಯಂ ಲೋಬೋ, ಹಾಗೂ ಕಾರ್ಯದರ್ಶಿ ಆಸ್ಟಿನ್ ಮೊಂತೆರೋ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *