Header Ads
Breaking News

ಮಂಗಳೂರಿನ ಸಾನಿಧ್ಯ ವಸತಿಯುತ ಶಾಲೆ : ಕ್ರಿಸ್‌ಮಸ್ ಹಬ್ಬದ ಸಂಭ್ರಮ ಸಡಗರ

ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಡಗರದಿಂದ ಆಚರಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೆರೆದವರನ್ನು ಮನರಂಜಿಸಿದರು.ನಗರದ ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಸಾನಿಧ್ಯ ವಸತಿಯುತ ಶಾಲೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಆನಂತರ ಶಕ್ತಿನಗರದ ಪ್ಯಾರೀಸ್, ಪ್ಯಾರೀಸ್ಟ್ ಮದರ್ ಆಫ್ ಗೋಡ್ ಚರ್ಚ್‌ನ ಫಾದರ್ ಜೆರಾಲ್ಡ್ ಡಿಸೋಜಾ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕ್ರಿಸ್‌ಮಸ್ ಹಬ್ಬದ ಸಂದೇಶ ಸಾರಿದರು.ಆನಂತರ ಅಲೀಸ್ ನೊರೊಹ್ನಾ ಅವರು ಕೇಕ್ ಕಟ್ ಮಾಡುವ ಮೂಲಕ ಕ್ರಿಸ್‌ಮಸ್ ಹಬ್ಬಕ್ಕೆ ಚಾಲನೆ ನೀಡಿ, ಕ್ರಿಸ್‌ಮಸ್ ಸಂದೇಶ ಸಾರಿದರು.ಇದೇ ವೇಳೆ ಸಾನಿಧ್ಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳೇ ರಚಿಸಿದ ಗೋದಲಿ ನೆರೆದವರ ಮನ ಸೆಳೆಯಿತು.ಈ ಸಂದರ್ಭ ಜಗದೀಶ್ ಶೆಟ್ಟಿ, ಸಾನಿಧ್ಯದ ಟ್ರಸ್ಟಿಗಳಾದ ಮಹಾಬಲ ಮಾರ್ಲ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *