Header Ads
Breaking News

ಮಂಗಳೂರಿನ ಸುಚಿತ್ರಾ ಟಾಕೀಸ್‌ಗೆ ಆಗಮಿಸಿದ ರಕ್ಷಿತ್ ಶೆಟ್ಟಿ

ಕರಾವಳಿ ಕುವರ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀ ಮನ್ನಾರಾಯಣ ಸಿನಿಮಾ ಯಶಸ್ಸಿ ಪ್ರದರ್ಶನ ಕಾಣುತ್ತಿದ್ದು, ಇಂದು ಸಿನಿಮಾ ತಂಡ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದೆ… ಮಂಗಳೂರಿನ ಸುಚಿತ್ರಾ ಟಾಕೀಸ್ ಆಗಮಿಸಿದ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ, ನಾಯಕಿ ಸಾನ್ವಿ ಶ್ರೀವತ್ಸವ್ ಸಹನಟರಾದ ಪ್ರಮೋದ್ ಶೆಟ್ಟಿ ಬಾಲಾಜಿ ಸಿನಿಮಾ ಯಶಸ್ವಿ ಕಾರಣಕರ್ತರಾದ ಪ್ರೇಕ್ಷಕರಿಗೆ ತುಳು ಭಾಷೆಯಲ್ಲಿ ಧನ್ಯವಾದ ಹೇಳಿದ್ದರು.ಬಳಿಕ ಮಾಧ್ಯಮದ ಜೊತೆ ಮಾತನಾಡಿದ ನಟ ರಕ್ಷಿತ್ ಶೆಟ್ಟಿ, ಅವನೇ ಶ್ರೀ ಮನ್ನಾರಾಯಣ ಸಿನಿಮಾಕ್ಕೆ ರಾಜ್ಯದಾದ್ಯಂತ ಒಳ್ಳೆಯ ರೆಸ್ಪನ್ಸ್ ಸಿಕ್ಕಿದ್ದು, ಚಿತ್ರ ಬಿಡುಗಡೆಯಾದ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ, ಇನ್ನೂ ಮಂಗಳೂರಿನಲ್ಲಿ ಕನ್ನಡ ಸಿನಿಮಾಗಳು ಹೆಚ್ಚಿನ ಪ್ರದರ್ಶನ ಕಾಣುದಿಲ್ಲ, ಆದರೆ ನನ್ನ ಅವನೇ ಶ್ರೀ ಮನ್ನಾರಾಯಣ ಸಿನಿಮಾ ಸೇರಿದಂತೆ ಎಲ್ಲ ಸಿನಿಮಾಗಳು ಮಂಗಳೂರಿನಲ್ಲೂ ಯಶಸ್ಸು ಕಾಣುತ್ತಿರುವುದು ಖುಷಿ ವಿಚಾರ ಅಂತ, ಪ್ರೇಕ್ಷಕರು ಬಯಸಿದಂತೆ ಚಿತ್ರವನ್ನು ಇನ್ನೊಮ್ಮೆ ಕೆಲ ಭಾಗ ಎಡಿಟ್ ಮಾಡಿದ್ದೇವೆ, ದಯವಿಟ್ಟು ಪೈರಸಿ ಮಾಡಬೇಡಿ ಅಂತ ಹೇಳಿದರು. ಇನ್ನೂ ತಮ್ಮ ಮೆಚ್ಚಿನ ನಾಯಕ ನಟನ ಜೊತೆಗೆ ಅಭಿಮಾನಿಗಳು ಸೆಲ್ಪಿ ಕ್ಲಿಕ್ಕಿಸಲು ಮುಗಿಬಿದ್ದ ದೃಶ್ಯ ಕಂಡು ಬಂತು

Related posts

Leave a Reply

Your email address will not be published. Required fields are marked *