Header Ads
Header Ads
Breaking News

ಮಂಗಳೂರಿನ ’ಸ್ನೇಹದೀಪ’ ಅನಥಾಶ್ರಮದಲ್ಲಿ ದೀಪಾವಳಿ ಸಂಭ್ರಮ

ಮಂಗಳೂರಿನ ’ಸ್ನೇಹದೀಪ’ ಅನಥಾಶ್ರಮದಲ್ಲಿ ದೀಪಾವಳಿಯ ಈ ಬಾರಿ ಸಂಭ್ರಮ ಇಮ್ಮಡಿಯಾಗಿತ್ತು. ಹಾಡು, ಕುಣಿತ, ಆಟ, ಮತ್ತು ಸಿಹಿತಿಂಡಿಯನ್ನು ಹಚ್ಚಿ ಸಂಭ್ರಮ ಪಟ್ಟರು,ಆದರೇ ಇದಕ್ಕೆಲ್ಲ ಕಾರಣ ನಗರದ ಹೆಸರಾಂತ ಗುಜರಾತಿ ಆಂಗ್ಲ ಮಾಧ್ಯಮ ಶಾಲೆ ಅದು ಹೇಗೆ ಅಂತ ಯೊಚಿಸ್ತಿದ್ದೀರ ಇಲ್ಲಿದೆ ಕಂಪ್ಲೀಟ್ ಸ್ಟೋರಿ…………

 ಹೌದು ಲಕ್ಷ ಲಕ್ಷ ಹಣ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸುವ ಇತ್ತಿಚಿನ ದಿನಗಳಲಿ. ಮಂಗಳೂರಿನ ಗುಜರಾತಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಮತ್ತು ಅಲ್ಲಿನ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಸಿಹಿತಿಂಡಿ ಹಂಚಿ ಹುಟ್ಟುಹಬ್ಬವನ್ನು ಆಚರಿಸುವ ಬದಲು ಹುಟ್ಟುಹಬ್ಬದ ದಿನದಂದು ತಮ್ಮ ಇಚ್ಚೆಯಂತೆ ತಮಗಿಷ್ಟಬಂದಷ್ಟು ಹಣವನ್ನು ಚಾರಿಟಿ ಫಂಡ್‌ಗೆ ಕೊಡುತ್ತಾರೆ. ಹೀಗೆ ಸಂಗ್ರಹವಾದ ಹಣವನ್ನು ಮಾದರಿ ಕಾರ್ಯಗಳಿಗೆ ಬಳಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಈ ಭಾರಿ ಗುಜರಾತಿ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಬೆಳಕಿನ ಹಬ್ಬ ದೀಪಾವಳಿಯನ್ನು ಮಂಗಳೂರಿನ ಬಿಜೈ ಕಾಪಿಕಾಡ್‌ನಲ್ಲಿರುವ ’ಸ್ನೇಹದೀಪ’ ಅನಥಾಶ್ರಮದ ಮಕ್ಕಳಿಗೆ ಬಟ್ಟೆ, ಗೂಡುದೀಪ, ಪಟಾಕಿ ಮತ್ತು ಸಿಹಿತಿಂಡಿಯನ್ನು ಹಂಚಿ ಆಚರಿಸಿದರು.

ಈ ವೇಳೆ ಗುಜರಾತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಅಶ್ವಿನಿ ಶೆಣೈ ವಿ೪ನ್ಯೂಸ್‌ಗೆ ಪ್ರತಿಕ್ರೀಯೆ ನೀಡಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಹುಟ್ಟುಹಬ್ಬದಂದು ಹಣವನ್ನು ಸಂಗ್ರಹಿಸಿ ವರ್ಷಕ್ಕೊಮ್ಮೆ ದೀಪಾವಳಿಯನ್ನು ಇಂತಹಾ ಮಕ್ಕಳೊಂದಿಗೆ ಗೂಡುದೀಪ, ಹಣತೆ, ಸಿಹಿತಿಂಡಿಯನ್ನು ಸಂತೋಷದಿಂದ ಆಚರಿಸುತ್ತೇವೆ.ಎಂದು ಹೇಳಿದರು

ಇನ್ನೂ ಗುಜರಾತಿ ಶಾಲೆಯ ಮಕ್ಕಳು ನೃತ್ಯ, ಹಾಡು, ಆಟದ ಹಣತೆ ಮತ್ತು ನಕ್ಷತ್ರ ಕಡ್ಡಿಯನ್ನು ಹಚ್ಚಿ ’ಸ್ನೇಹದೀಪ’ ಅನಥಾಶ್ರಮದ ಮಕ್ಕಳೊಂದಿಗೆ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.ಬಳಿಕ ಡೊಂಗರಕೇರಿ ವಾರ್ಡ್‌ನ ಕಾರ್ಪೋರೇಟರ್ ರಾಜೇಂದ್ರ ಕುಮಾರ್ ಮಾತನಾಡಿ ಈ ಸ್ನೇಹದೀಪ ಅನಾಥಾಶ್ರಮದಲ್ಲಿ ಸುಮಾರು 25 ಅನಾಥ ಮಕ್ಕಳಿದ್ದಾರೆ.ಇವರೊಂದಿಗೆ ದೀಪಾವಳಿಯನ್ನು ಆಚರಿಸುವುದು ನಮಗೆ ಸಂತೋಷಕೊಡುತ್ತದೆ. ನಾವು ಇಲ್ಲಿ ಬಂದಾಗ ಅವರ ಮುಖದಲ್ಲಿ ಸಂತೋಷದ ನಗು ಮೂಡುತ್ತದೆ. ಈ ನಿಟ್ಟಿನಲ್ಲಿ ಗುಜರಾತಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ ಮತ್ತು ಅಲ್ಲಿನ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ಗುಜರಾತಿ ಆಗ್ಲಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರೆಹಮತ್ತುಲ್ಲಾ ಖಾದರ್, ಸಿ.ಎಫ್.ಎ.ಎಲ್‌ನ ನಿರ್ದೆಶಕರಾದ ಸಚಿತಾನಂದಗೊಪಾಲ್ ಮತ್ತಿತರರು ಉಪಸ್ಥಿತರಿದ್ದರು.ಒಟ್ಟಿನಲ್ಲಿ ಗುಜರಾತಿ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ ಮತ್ತು ಅಲ್ಲಿನ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಇಂತಹಾ ಕಾರ್ಯಗಳು ನಮ್ಮ ಸಮಾಜದಕ್ಕೆ ಮಾದರಿಯಾಗಲಿ ಎನ್ನುವುದೇ ನಮ್ಮ ಆಶಯ…
ವರದಿ:ಪವನ್ ಕಾಜಿಮಡ್ಕ

Related posts

Leave a Reply