Header Ads
Breaking News

ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಸೆಂಟರ್‌ನಲ್ಲಿರುವ ಅಲೋಕ್ ಡಿಸ್ಟ್ರಿಬ್ಯೂಟರ್‍ಸ್ ವಸ್ತ್ರಮಳಿಗೆಗೆ 50ರ ಸಂಭ್ರಮ

ಮಂಗಳೂರು ನಗರದ ಪ್ರಸಿದ್ಧ ವಸ್ತ್ರ ಮಾರಾಟ ಮಳಿಗೆ ಅಲೋಕ್ ಡಿಸ್ಟ್ರಿಬ್ಯೂಟರ್ಸ್‍ಗೆ ಇದೀಗ 50ರ ಸಂಭ್ರಮ. ಈ ಸುವರ್ಣ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸಲು ಸಂಸ್ಥೆಯು ನಿರ್ಧರಿಸಿದ್ದು, ಗ್ರಾಹಕರಿಗಾಗಿ ಲಕ್ಕಿ ಡ್ರಾ ಯೋಜನೆಯನ್ನು ಹಮ್ಮಿಕೊಂಡಿತ್ತು. ಇಂದು ಈ ಯೋಜನೆಯ ವಿಜೇತರನ್ನು ಆಯ್ಕೆಮಾಡಲಾಯಿತು.

ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಸೆಂಟರ್‍ನಲ್ಲಿರುವ ಅಲೋಕ್ ಡಿಸ್ಟ್ರಿಬ್ಯೂಟರ್ಸ್ ಟೆಕ್ಸ್‍ಟೈಲ್ಸ್ ಮತ್ತು ರೆಡಿಮೇಡ್ಸ್ ಮಳಿಗೆ ಇದೀಗ ಸುವರ್ಣಮಹೋತ್ಸವದ ಸಂಭ್ರಮದಲ್ಲಿದೆ. 1968ರಲ್ಲಿ ಆರಂಭಗೊಂಡ ಅಲೋಕ್ ಡಿಸ್ಟಿಬ್ಯೂಟರ್ಸ್ ಟೆಕ್ಸ್‍ಟೈಲ್ಸ್ ಮತ್ತು ರೆಡಿಮೇಡ್ಸ್ ಮಳಿಗೆ ಇದೀಗ ಗ್ರಾಹಕರ ಅಚ್ಚುಮೆಚ್ಚಿನ ಬಟ್ಟೆ ಮಳಿಗೆಯಾಗಿದೆ. ಈಗಾಗಲೇ ತನ್ನ ಗುಣಮಟ್ಟದ ಸೇವೆಗೆ ಪ್ರಸಿದ್ಧಿಯನ್ನು ಪಡೆದಿರುವ ಸಂಸ್ಥೆಯು 50ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ವಿಶೇಷ ಲಕ್ಕಿ ಡ್ರಾ ಯೋಜನೆಯನ್ನು ಹಮ್ಮಿಕೊಂಡಿತ್ತು. ವಿಜೇತರಿಗೆ ಸುಝುಕಿ ಆಕ್ಸೆಸ್ 125 ದ್ವಿಚಕ್ರ ವಾಹನವನ್ನು ಗೆಲ್ಲುವ ಅವಕಾಶವನ್ನು ಒದಗಿಸಿತ್ತು. ಈ ಯೋಜನೆಯ ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಲಾಯಿತು.

 50ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಳಿಗೆಯಲ್ಲಿ ಬಟ್ಟೆ ಖರೀದಿಸುವ ಗ್ರಾಹಕರಿಗೆಲಕ್ಕಿ ಕೂಪನ್‍ಗಳನ್ನು ವಿತರಿಸಲಾಗಿತ್ತು. ಇಂದು ಅದೃಷ್ಠ ಶಾಲಿಯನ್ನು ಆಯ್ಕೆಗೊಳಿಸಲಾಯ್ತು. ಅಲೋಕ್ ಡಿಸ್ಟಿಬ್ಯೂಟರ್ಸ್ ಮಳಿಗೆಯ ಮಾಲಕರಾದ ರಾಜೀವ್ ಸಾಬೂ ಅವರು ಅದೃಷ್ಠಶಾಲಿಯನ್ನು ಆಯ್ಕೆ ಮಾಡಿದ್ರು. ಮಂಗಳೂರಿನ ಪಡೀಲ್ ಮೂಲದ ಗ್ರಾಹಕ ನವೀನ್ ಎನ್ನುವವರು ಸುಝಕಿ ಆಕ್ಸೆಸ್ 125 ಸ್ಕೂಟರ್‍ನ್ನು ಗೆದ್ದುಕೊಂಡರು. ಈ ವೇಳೆ ಮಾತನಾಡಿದ ಮಳಿಗೆಯ ಮಾಲಕ ರಾಜೀವ್ ಸಾಬೂ ಅವರು, ಮಳಿಗೆಯು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲೂ ನಗುಮೊಗದ ಸೇವೆ ಮುಂದುವರೆಯುತ್ತದೆ ಎಂದು ಹೇಳಿದರು. 

ಮಂಗಳೂರಿನ ಮಿಲಾಗ್ರಿಸ್ ಸೆಂಟರ್‍ನಲ್ಲಿ ವಿಶಾಲವಾದ ಮಳಿಗೆಯನ್ನು ಹೊಂದಿರುವ ಅಲೋಕ್ ಡಿಸ್ಟ್ರಿಬ್ಯೂಟರ್ಸ್ ಮಳಿಗೆಯಲ್ಲಿ ವಿವಿಧ ಬ್ರ್ಯಾಂಡ್‍ಗಳ ಗುಣಮಟ್ಟದ ಪ್ಯಾಂಟ್‍ಪೀಸ್‍ಗಳು, ಶರ್ಟ್ ಪೀಸ್‍ಗಳು ಲಭ್ಯವಿದೆ. ಇದರ ಜೊತೆಗೆ ನವನವೀನ ವಿನ್ಯಾಸದ ರೆಡಿಮೆಂಡ್ ಶರ್ಟ್, ಪ್ಯಾಂಟ್ಸ್ ಹೀಗೆ ಎಲ್ಲಾಬಗೆಯ ವಸ್ತ್ರಗಳು ಇಲ್ಲಿ ಲಭ್ಯವಿದೆ. ಮುಂದಕ್ಕೂ ಗುಣಮಟ್ಟದ ಸೇವೆ ನೀಡಲು ಸಂಸ್ಥೆ ಬದ್ಧವಾಗಿದೆ.

Related posts

Leave a Reply

Your email address will not be published. Required fields are marked *