Header Ads
Header Ads
Breaking News

ಮಂಗಳೂರು:ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಜಾಥಾ

 ಕರ್ನಾಟಕ ಆಯುರ್ವೇದ ವೈದ್ಯಕೀಯ ವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳೂರಲ್ಲಿ ಜಾಥಾ ನಡೆಯಿತು. ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಆಯುರ್ವೇದ ವೈದ್ಯಕೀಯ ವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಜಾಥಾ ನಡೆಯಿತು. ಮಂಗಳೂರಿನ ಆಶೋಕನಗರದಲ್ಲಿರುವ ಆಯುರ್ವೇದ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲಿ ನಡೆದ ಜಾಥಾಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂತೋಷ್ ಅವರು ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಅವರು, ಜನರಿಗೆ ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಾಥಾವನ್ನ ಹಮ್ಮಿಕೊಳ್ಳಲಾಗಿದೆ. ಇದರ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಾಗಿದೆ ಅಂತಾ ಹೇಳಿದರು.

ಈ ವೇಳೆ ಉಪ ಪ್ರಾಂಶುಪಾಲರಾದ ಡಾ.ಜೆಸಿಂತಾ ಎಮ್.ಡಿಸೋಜಾ, ಎನ್.ಎಸ್.ಎಸ್ ವಿಭಾಗದ ಯೋಜನಾಧಿಕಾರಿ ಡಾ.ಗಣೇಶ್ ನಾಯಕ್ ಮತ್ತು ಚೈತ್ರಾ ಶೆಟ್ಟಿ, ಹಾಗೂ ಡಾ.ಸುಭಾಷ್ ರೈ ,ಡಾ. ಕಾರ್ತಿಕ್ ರೈ, ಡಾ.ಅಜಯ್ ಭಟ್ ಹಾಗೂ ಡಾ.ಅದಿತಿ ಪಿ.ಎಸ್, ಡಾ.ವಾಣಿ ಬಿ, ಡಾ.ಸಪ್ನ.ಡಿ ಹಾಗೂ ಸುಮಾರು ೪೫೦ಕ್ಕೂ ಅಧಿಕ ಜಾಥಾದಲ್ಲಿ ಪಾಲ್ಗೊಂಡಿದ್ರು. ಜಾಥಾವೂ ಕಾಲೇಜಿನ ಆವರಣದಿಂದ ಉರ್ವಸ್ಟೋರ್ , ಲೇಡಿಹಿಲ್ ವೃತ್ತ, ಉರ್ವ ಮಾರ್ಕೇಟ್ ಮಾರ್ಗವಾಗಿ ಕಾಲೇಜಿಗೆ ತಲುಪಿತ್ತು.

Related posts

Leave a Reply