Header Ads
Breaking News

ಮಂಗಳೂರು ಏರ್‍ಪೋರ್ಟ್‍ಗೆ ಬಾಂಬ್ ಇಟ್ಟ ಪ್ರಕರಣ : ತನಿಖೆ ವೇಳೆ ಹಲವು ವಿಚಾರ ಬಹಿರಂಗ ಮಾಡಿರುವ ಆದಿತ್ಯ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ಹಲವು ಬ್ಯಾಂಕ್‍ಗಳಲ್ಲಿ ಸೇಫ್ ಲಾಕರ್ ಹೊಂದಿದ್ದ ಎಂಬ ವಿಚಾರ ಬಯಲಾಗಿದೆ.ಮೂಲತಃ ಉಡುಪಿಯ ಮಣಿಪಾಲದವನಾಗಿರುವ ಆರೋಪಿ ಆದಿತ್ಯ ರಾವ್ ಉಡುಪಿಯ ಕುಂಜಿಬೆಟ್ಟಿನಲ್ಲಿರುವ ಕರ್ಣಾಟಕ ಬ್ಯಾಂಕ್ ನಲ್ಲಿ ಸೇಫ್ ಲಾಕರ್ ಎಂಬ ಮಾಹಿತಿ ಪೊಲೀಸ್ ರಿಗೆ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಪೊಲೀಸ್ ರು ಆರೋಪಿಯನ್ನು ಉಡುಪಿಗೆ ಕರೆದುಕೊಂಡು ಬಂದು ತಪಾಸಣೆ ನಡೆಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಮಂಗಳೂರು ಉತ್ತರ ಪೊಲೀಸ್  ಉಪವಿಭಾಗದ ಎಸಿಪಿ ಬೆಳ್ಳಿಯಪ್ಪ ಅವರ ತಂಡ ಆರೋಪಿ ಆದಿತ್ಯ ರಾವ್ ನನ್ನು ಉಡುಪಿಗೆ ಕರೆದುಕೊಂಡು ಬಂದಿದ್ದರು. ಉಡುಪಿಯಲ್ಲಿ ನಗರ ಪೊಲೀಸ್ಸರು ಸಾಥ್ ನೀಡಿದ್ದಾರೆ. ಕುಂಜಿಬೆಟ್ಟು ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿರುವ ಸೇಫ್ ಲಾಕರ್ ಪರಿಶೀಲನೆ ನಡೆಸಲಾಗಿದೆ. ಲಾಕರ್ ನಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಲಾಕರ್ ನಲ್ಲಿ ಒಂದು ಪ್ಯಾಕೆಟ್ ಪತ್ತೆಯಾಗಿದ್ದು ಅದನ್ನು ಪ್ರಯೋಗ ಶಾಲೆಗೆ ನೀಡಿ ಪರಿಶೀಲಿಸಲಾಗುವುದು ಎಂಬ ಮಾಹಿತಿ ಲಭ್ಯವಾಗದೆ. ಉಳಿದಂತೆ ಕೆಲವು ಕಾಗದ ಪತ್ರಗಳು ಲಭ್ಯವಾಗಿದೆ.

Related posts

Leave a Reply

Your email address will not be published. Required fields are marked *