Header Ads
Header Ads
Header Ads
Breaking News

ಮಂಗಳೂರು ಕಾರಾಗೃಹದಲ್ಲಿ ಖೈದಿಗಳ ಮಾರಾಮಾರಿ ಉಡುಪಿ ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳ ಮೇಲೆ ಹಲ್ಲೆ ನವನೀತ್, ನಿರಂಜನ್ ಮೇಲೆ ಕೈದಿಗಳ ಗುಂಪಿನಿಂದ ಹಲ್ಲೆ

 

ಅನಿವಾಸಿ ಉದ್ಯಮಿ ಉಡುಪಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಬ್ಬರಿಗೆ ಮಂಗಳೂರು ಸಬ್ ಜೈಲಿನಲ್ಲಿ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ. ಜ್ಯೋತಿಷಿ ನಿರಂಜನ ಭಟ್ ಮತ್ತು ಭಾಸ್ಕರ ಶೆಟ್ಟಿ ಪುತ್ರ ನವನೀತ್ ಶೆಟ್ಟಿ ಹಲ್ಲೆಗೊಳಗಾಗಿದ್ದು ಮಂಗಳೂರಿನ
ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಜಿಲಕೇರಿ ಧನರಾಜ್ ಮತ್ತು ತಂಡದವರು ಹಲ್ಲೆ ನಡೆಸಿದ್ದಾರೆ. ೨೦೧೬ ರ ಜುಲೈನಲ್ಲಿ ಉದ್ಯಮಿ ಭಾಸ್ಕರ ಶೆಟ್ಟಿಯನ್ನು ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಮತ್ತು ಜ್ಯೋತಿಷಿ ನಿರಂಜನ್ ಭಟ್ ಸೇರಿ ಕೊಲೆಗೈದು ಹೋಮಕುಂಡದಲ್ಲಿ ಸುಟ್ಟು ಹಾಕಿದ್ದ ಆರೋಪ ಇದೆ. ಬಂಧನದ ಬಳಿಕ ಆರೋಪಿಗಳು ಮಂಗಳೂರಿನ ಜೈಲಿನಲ್ಲಿದ್ದಾರೆ. ಆರೋಪಿಗಳ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದ ಬಳಿಕ ಜೈಲಿನಲ್ಲೇ ಇದ್ದು ವಿಚಾರಣೆಗೆ ಹಾಜರಾಗುತ್ತಿದ್ದಾರೆ.

Related posts

Leave a Reply