Header Ads
Breaking News

ಮಂಗಳೂರು : ಕುಖ್ಯಾತ ರೌಡಿ ಉಮರ್ ಫಾರೂಕ್ ಮೇಲೆ ಪೊಲೀಸ್ ಫೈರಿಂಗ್

ಆರೋಪಿಗಳನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಕುಖ್ಯಾತ ರೌಡಿಯನ್ನು ಶೂಟೌಟ್ ಮಾಡಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ಪಚ್ಚನಾಡಿಯಲ್ಲಿ ಘಟನೆ ನಡೆದಿದೆ. ಟಾರ್ಗೆಟ್ ಗ್ರೂಪ್ ಸದಸ್ಯ, ರೌಡಿ ಉಮರ್ ಫಾರೂಕ್ ಮೇಲೆ ಫೈರಿಂಗ್ ನಡೆಸಲಾಗಿದೆ. ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಸಮೀರ್ ಹತ್ಯೆಗೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಉಮರ್ ಫಾರೂಕ್‌ನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ಸಂದರ್ಭ ಪೊಲೀಸರ ಮೇಲೆ ದಾಳಿ ಉಮರ್ ಫಾರೂಕ್ ಮತ್ತು ತಂಡ ದಾಳಿ ನಡೆಸಿತ್ತು. ಈ ಸಂದರ್ಭ ಪೊಲೀಸರು ಶೂಟೌಟ್ ಮಾಡಿದ್ದಾರೆ.

ಶೂಟೌಟ್ ಕಾಳಗದಲ್ಲಿ ಪೊಲೀಸ್ ಪೇದೆ ಸಂದೀಪ್ ಎಂಬವರು ಗಾಯಗೊಂಡಿದ್ದಾರೆ. ಒಂದು ವರ್ಷದ ಹಿಂದೆ ಕೊಲೆಯಾಗಿದ್ದ ಟಾರ್ಗೆಟ್ ಗ್ರೂಪ್ ಮುಖಂಡ ಇಲ್ಯಾಸ್‌ನ ಸಂಬಂಧಿ ಉಮರ್ ಫಾರೂಕ್, ಸುರ್ಮಾ ಇಮ್ರಾನ್ ಜೊತೆ ಸೇರಿ ಸಮೀರ್‌ನ ಹತ್ಯೆಗೆ ಸ್ಕೆಚ್ ರೂಪಿಸಿದ್ದ. ಎರಡು ಪ್ರಮುಖ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಉಮರ್ ಫಾರೂಕ್‌ನ್ನು ಶೂಟೌಟ್ ನಡೆಸಿ ಬಂಧಿಸುವಲ್ಲಿ ಕಂಕನಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶೂಟೌಟ್‌ನಲ್ಲಿ ಗಾಯಗೊಂಡಿರುವ ರೌಡಿ ಫಾರೂಕ್ ಮತ್ತು ಪೊಲೀಸ್ ಪೇದೆ ಸಂದೀಪ್‌ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Related posts

Leave a Reply

Your email address will not be published. Required fields are marked *