Header Ads
Breaking News

ಮಂಗಳೂರು ಗಲಭೆ- ಪೊಲೀಸ್ ಗೋಲಿಬಾರ್ ಪ್ರಕರಣ : ಸಿಐಡಿ ಎಸ್ಪಿ ರಾಹುಲ್ ಶಹಾಪೂರ್ ನೇತೃತ್ವದ ತಂಡದಿಂದ ತನಿಖೆ

ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಗಾಗಿ ಸಿಐಡಿ ಪೊಲೀಸರ ತಂಡ ಮಂಗಳೂರುಗೆ ಆಗಮಿಸಿ ತನಿಖೆ ಕೈಗೆತ್ತಿಕೊಮಡಿದೆ. ಸಿಐಡಿ ಎಸ್ಪಿ ರಾಹುಲ್ ಶಹಾಪೂರ್ ನೇತೃತ್ವದ 5ಮಂದಿ ಅಧಿಕಾರಿಗಳ ತಂಡ ತನಿಖೆಯನ್ನು ಕೈಗೆತ್ತಿಕೊಂಡಿದೆ. ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ಕೂಡಾ ನೀಡಲಾಗಿದೆ. ಸಿಐಡಿ ತಂಡ ಪ್ರಥಮವಾಗಿ ಡಿ.19ರಂದು ನಡೆದ ಹಿಂಸಾಚಾರ ಘಟನೆಯ ಬಗ್ಗೆ ವಾಸ್ತವ ಚಿತ್ರಣದ ಮಾಹಿತಿಯನ್ನು ಕಲೆ ಹಾಕಿದ ಬಳಿಕ ತನಿಖೆಯನ್ನು ಕೈಗೆತ್ತಿಕೊಳ್ಳಲಿದ್ದು, ಈ ನಿಟ್ಟಿನಲ್ಲಿ ಘಟನಾವಳಿಯ ಮಾಹಿತಿ ಕಲೆಹಾಕುವ ಕಾರ್ಯದಲ್ಲಿ ನಿರತವಾಗಿದೆ.

Related posts

Leave a Reply

Your email address will not be published. Required fields are marked *