Header Ads
Breaking News

ಮಂಗಳೂರು ಗಲಭೆ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯದಿಂದ ಅಮಾಯಕರು ಬಲಿಯಾಗಿದ್ದಾರೆ : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಮಂಗಳೂರಿನಲ್ಲಿ ನಡೆದ ಫೈರಿಂಗ್ ಪ್ರಕರಣದಲ್ಲಿ ಅಮಾಯಕರು ಬಲಿಯಾಗಿದ್ದಾರೆ. ಸಾವನ್ನಪ್ಪಿದವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದೇನೆ.ಘಟನೆಯಲ್ಲಿ ಬಲಿಯಾದರು ಅಮಾಯಕರು. ಕೆಲವರು ಅದೃಷ್ಟವಶಾತ್ ಸತ್ತು ಹೋಗಿಲ್ಲ.ಇಡೀ ದೇಶದಲ್ಲಿ 25 ಜನ ಸತ್ತಿದ್ದಾರೆ ಇವರೆಲ್ಲರ ಸಾವಿಗೆ ಕಾರಣಕರ್ತರು ಮೋದಿ, ಅಮಿತ್ ಶಾ ಮತ್ತು ಬಿಜೆಪಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಆರೋಪಿಸಿದರು.ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಮಂಗಳೂರು ಘಟನೆ ರಾಜ್ಯ ಸರಕಾರದ ಸಂಪೂರ್ಣ ವಿಫಲತೆ ತೋರಿಸುತ್ತದೆ. ಇದನ್ನು ಸರಕಾರ ಬಯಸಿತ್ತೋ ಎಂಬ ಅನುಮಾನ ಮೂಡುತ್ತದೆ. ಬೆಂಗಳೂರಿನಲ್ಲಿ ಅಷ್ಟು ದೊಡ್ಡ ಪ್ರತಿಭಟನೆ ನಡೆದ್ರೂ  ಒಂದು ಅಹಿತಕರ ಘಟನೆ ನಡೆಯಲಿಲ್ಲ. ಆದ್ರೆ ಇಲ್ಲಿ ಮಾತ್ರ ಯಾಕೆ ಘಟನೆ ನಡೆಯಿತು.ಇಡೀ ರಾಜ್ಯದಲ್ಲಿ 144 ಸೆಕ್ಷನ್ ಯಾಕೆ ಹಾಕಿದ್ದಾರೆ. ಪ್ರಚೋದನಾಕಾರಿ ರೀತಿಯಲ್ಲಿ ಪೊಲೀಸರು ವರ್ತಿಸಿದ್ದಾರೆ.ಇದಕ್ಕೆ ಸರಕಾರ ನಿರ್ದೇಶನ ಮೊದಲೇ ತಿರ್ಮಾನ ಮಾಡಿತ್ತು. ವಿಧೇಯಕವನ್ನು ಎಲ್ಲ ಧರ್ಮದವರು ವಿರೋಧಿಸುತ್ತಿದ್ದಾರೆ. ಮಂಗಳೂರು ಘಟನೆ ಇತಿಹಾಸದಲ್ಲಿ ಎಲ್ಲೂ ಆಗಿಲ್ಲ ಸುಮ್ಮನೆ ಕೇರಳದಿಂದ ಬಂದಿದ್ದರು ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡುರಾವ್ ಅವರು, ಪ್ರಧಾನಿ ತಲೆಯೇ ಪೂರ್ವಾಗ್ರಹ ಪೀಡಿತರು ಮತ್ತೆ ಅವರ ಹಿಂಬಾಲಕರು ಹೇಗೆ ಇರಲು ಸಾಧ್ಯ ಇವರೆಲ್ಲ ಸಂಸದರಾಗಲು ನಾಲಾಯಕ್ ಎಂದು ಹೇಳಿದರು. ಈ ಸಂದರ್ಭ ಕಾಂಗ್ರೆಸ್‌ನ ಮುಖಂಡರು ಹಾಜರಿದ್ದರು.

 

Related posts

Leave a Reply

Your email address will not be published. Required fields are marked *