Header Ads
Header Ads
Breaking News

ಮಂಗಳೂರು ಗಲಭೆ ಬಗ್ಗೆ ಎನ್‌ ಐಎಗೆ ನೀಡುವ ಅಗತ್ಯವಿಲ್ಲ: ಪ್ರಮೋದ್ ಮುತಾಲಿಕ್ 

ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣವನ್ನು ಎನ್‌ಐಎಗೆ ನೀಡುವ ಅಗತ್ಯವಿಲ್ಲ, ರಾಜ್ಯದ ಪೊಲೀಸರು ಸಮರ್ಥರಿದ್ದಾರೆ ಅಂತಾ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟಿದ್ದಾರೆ. ಮಂಗಳೂರಿನಲ್ಲಿ ಪ್ರಕರಣವೊಂದರ ತನಿಖೆಗೆಗೆ ನ್ಯಾಯಾಲಯಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಹತ್ಯೆಯ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಜಿಲ್ಲೆಯಲ್ಲಿ ಕೇರಳ ಮಾದರಿಯಲ್ಲಿ ಕೊಲೆ ರಾಜಕೀಯ ಪಸರಿಸುತ್ತಿದೆ. ಈವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ ಇದು ರಾಜ್ಯ ಸರ್ಕಾರ ಹಾಗೂ ಗುಪ್ತಚರ ಇಲಾಖೆಯ ವೈಫಲ್ಯ ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೀಗ ಭಯದ ವಾತಾವರಣ ಇಲ್ಲ, ದೊಂಬಿಯಾಗುತ್ತಿದೆ ವಿನಾ ಕಾರಣ ಬಿಂಬಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇನ್ನೂ ಪಿಎಫ್‌ಐ ಹಾಗೂ ಎಸ್‌ಡಿಪಿಐ ಅವರ ಇತಿಹಾಸ ನೋಡಬೇಕು. ಅವರಿಗೆ ಭಯೋತ್ಪಾದನೆ ನಂಟು ಇದೆ ಎಂದು ಆರೋಪಿಸಿದ್ರು.
ವರದಿ: ನಾಗೇಶ್ ಕಾವೂರು

Related posts

Leave a Reply