Header Ads
Header Ads
Header Ads
Breaking News

ಮಂಗಳೂರು ಚಲೋ ರ್‍ಯಾಲಿ ಹಿನ್ನೆಲೆ ಬೈಂದೂರಿನ ಹೆಮ್ಮಾಡಿಯಲ್ಲಿ ಪ್ರತಿಭಟನೆ

 

ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಮತ್ತು ಯುವ ಮೋರ್ಚಾ ಬೈಂದೂರು ವತಿಯಿಂದ ರಾಜ್ಯಾದ್ಯಂತ ಹಿಂದೂ ಯುವಕರ ಹತ್ಯೆಯನ್ನು ಖಂಡಿಸಿ ಮತ್ತು ಕೆ.ಎಫ್.ಡಿ. ಪಿ.ಎಫ್.ಐ. ಸಂಘಟನೆಯನ್ನು ನಿಷೇಧಿಸುವಂತೆ ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ಮಂಗಳೂರು ಚಲೋ ಹಾಗೂ ಬೃಹತ್ ಬೈಕ್ ರ್‍ಯಾಲಿ ಮತ್ತು ಪ್ರತಿಭಟನೆ ಬುಧವಾರ ಸಂಜೆ ಹೆಮ್ಮಾಡಿ ವೃತ್ತದಲ್ಲಿ ನಡೆಸಿದರು.

ಮಂಗಳೂರು ಚಲೋ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಶಾ ನಾಯಕ್ ನಾವು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಪ್ರತಿಭಟನಾ ರ್‍ಯಾಲಿ ನಡೆದೇ ನಡೆಯುತ್ತದೆ. ಇದನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಈ ರ್‍ಯಾಲಿಯನ್ನು ಹತ್ತಿಕ್ಕುವ ಯತ್ನವನ್ನು ಸರ್ಕಾರ ಮಾಡುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಸಂಘ ಪರಿವಾರದ ೨೪ ಕಾರ್ಯಕರ್ತರ ಹತ್ಯೆ ನಡೆದಿದೆ. ಅದ್ದರಿಂದ ಅರಣ್ಯ ಸಚಿವ ರಮಾನಾಥ ರೈ ರಾಜೀನಾಮೆ ನೀಡೋವರೆಗೂ ಬಿಜೆಪಿಯ ಹೋರಾಟ ನಿಲ್ಲದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶಾ ನಾಯಕ್, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಿ.ಎಂ.ಸುಕುಮಾರ್ ಶೆಟ್ಟಿ, ಬೈಂದೂರು ಯುವ ಮೋರ್ಚಾ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Related posts

Leave a Reply