Header Ads
Header Ads
Breaking News

ಭಾರತ್ ಬಂದ್ ಹಿನ್ನೆಲೆ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ. ಪ್ರಯಾಣಿಕರನ್ನು ಆಟೋದಿಂದ ಇಳಿಸಿದ ಪ್ರತಿಭಟನಾನಿರತರು. ಪೊಲೀಸರ ವಿರುದ್ಧ ಕಿಡಿಕಾರಿದ ಶಾಸಕ ವೇದವ್ಯಾಸ್ ಕಾಮತ್.

ತೈಲ, ದಿನಬಳಕೆ ವಸ್ತುಗಳ ಬೆಲೆಯೇರಿಕೆಯನ್ನು ಖಂಡಿಸಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಕರೆನೀಡಿರುವ ಭಾರತ್ ಬಂದ್‌ಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಬಸ್ ಇಲ್ಲದ ಕಾರಣ ಪ್ರಯಾಣಿಕರು ಆಟೋ ಹತ್ತಿದ್ದರು. ಆದರೆ ಪ್ರಯಾಣಿಕರನ್ನು ಆಟೋದಿಂದ ಇಳಿಸಿದ್ದಕ್ಕಾಗಿ ವೇದವ್ಯಾಸ ಕಾಮತ್ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾವು ಪ್ರತಿಭಟನೆ ಮಾಡಿದರೆ ನಮ್ಮನ್ನ ಥಟ್ ಅಂತಾ ಅರೆಸ್ಟ್ ಮಾಡ್ತೀರಾ. ಆದ್ರೆ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದರೆ, ಪ್ರಯಾಣಿಕರ ಮೇಲೆ ದಬ್ಬಾಳಿಕೆ ನಡೆಸಿದ್ರೆ ಅರೆಸ್ಟ್ ಮಾಡುವುದಿಲ್ಲ. ನಿಮಗೆ ಧಮ್ ಇದ್ರೆ ಅರೆಸ್ಟ್ ಮಾಡಿ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Related posts

Leave a Reply