Header Ads
Header Ads
Breaking News

ಮಂಗಳೂರು ದಸರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಳೆಯ ಮಧ್ಯೆಯೂ ಮಂಗಳೂರು ದಸರಾ ಉತ್ಸವವನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಕುಮಾರಸ್ವಾಮಿ ದಸರಾ ಉತ್ಸವದ ಧ್ವಜವನ್ನು ಉತ್ಸವ ಸಮಿತಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್ ರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ರಾಜ್ಯದಲ್ಲಿ ಮೈಸೂರು ಅರಸರ ರಾಜ ಪರಂಪರೆಯೊಂದಿಗೆ ಮೈಸೂರು ದಸರಾ ನಡೆದು ಬಂದಿದೆ. ರಾಜ್ಯದ ಹಲವು ಕಡೆಗಳಲ್ಲಿ ದಸರಾ ಉತ್ಸವ ಆಚರಣೆಗೆ ಅನುದಾನದ ಬೇಡಿಕೆ ಇಡುತ್ತಿದ್ದಾರೆ. ಆದರೆ ಮಂಗಳೂರು ದಸರಾ ರಾಜ್ಯದಲ್ಲಿ ವಿಶಿಷ್ಟ ರೀತಿಯಲ್ಲಿ ನಡೆಯುತ್ತಿದೆ. ಜನರೆ ಸೇರಿ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಇದೊಂದು ಜನರೇ ಸೇರಿ ನಡೆಸುತ್ತಿರುವ ಉತ್ಸವವಾಗಿದೆ ಎಂದರು.

ಇನ್ನು ಕುದ್ರೋಳಿ ಕ್ಷೇತ್ರದಲ್ಲಿ ಮಂಗಳೂರು ದಸರಾ ಉತ್ಸವವನ್ನು ಉದ್ಘಾಟಿಸುವ ಭಾಗ್ಯ ನನಗೆ ದೊರೆತಿರುವುದು ನನ್ನ ಅದೃಷ್ಟದ ಕ್ಷಣವಾಗಿದೆ ಅಂತಾ ಸಿಎಂ ಹೇಳಿದ್ರು.ತದ ನಂತರ ಮಾತನಾಡಿದ ಮಾಜಿ ಸಚಿವ ಜನಾರ್ದನ ಪೂಜಾರಿ, ಕುಮಾರ ಸ್ವಾಮಿಯವರೇ ನೀವು ಬಹಳ ಎತ್ತರಕ್ಕೆ ಹೋಗ್ತೀರಿ, ರಾಷ್ಟ್ರಪತಿಯಾಗ್ತೀರಿ.ಆಗ ನಾನು ಇರಲಿಕ್ಕಿಲ್ಲ. ಪೂಜಾರಿ ದೇವರ ಸಮಕ್ಷಮ ಈ ಮಾತು ಹೇಳದ್ದರೆಂದು ನೆನಪಿಸಿಕೊಳ್ಳುವಿರಿ ಎಂದು ಪೂಜಾರಿ ನುಡಿದರು. ಇದಕ್ಕೂ ಮೊದ್ಲು ಸಿಎಂ ಕುಮಾರಸ್ವಾಮಿಯವ್ರನ್ನ ಸ್ವಾಗತಿಸಲು ದಸರಾ ರೂವಾರಿ, ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಸುಮಾರು ಒಂದು ಗಂಟೆಗಳ ಕಾಲ ದೇಗುಲದ ಎದುರು ಕುರ್ಚಿಯಲ್ಲಿ ಕೂತು ಮಳೆಯಲ್ಲಿ ನೆನೆದ ಘಟನೆಯೂ ನಡೀತು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರನ್ನು ಜನಾರ್ದನ ಪೂಜಾರಿ ಅಭಿನಂದಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ.ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಎಸ್.ಎಲ್.ಬೋಜೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply