Header Ads
Header Ads
Header Ads
Breaking News

ಮಂಗಳೂರು ದಸರಾಕ್ಕೆ ತೆರೆ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುತ್ತಿರುವ ಮಂಗಳೂರು ದಸರಾ 2017 ರ ಮೆರವಣಿಗೆ ಇಂದು ಬೆಳಿಗ್ಗೆ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹವನ್ನು ದೇವಸ್ಥಾನದ ಆವರಣದ ಕೊಳದಲ್ಲಿ ವಿಸರ್ಜಿಸುವುದರೊಂದಿಗೆ ವಿದ್ಯುಕ್ತವಾಗಿ ಸಮಾಪನಗೊಂಡಿತು.


ಗಣಪತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹದ ಜೊತೆ ನವದುರ್ಗೆಯರ ವಿಗ್ರಹಳ ವರ್ಣರಂಜಿತ ಮೆರವಣಿಗೆ ಕುದ್ರೋಳಿಯಿಂದ ನಿನ್ನೆ ಸಂಜೆ ಹೊರಟಿತ್ತು. ಮೆರವಣಿಗೆಯು ನಗರದ ರಸ್ತೆಯ ಮೂಲಕ ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್. ಲಾಲ್‌ಭಾಗ್, ಬಳ್ಳಾಲ್ ಭಾಗ್, ಪಿವಿಎಸ್ ವೃತ್ತ, ನವಭಾರತ್ ವೃತ್ತ, ಕೆಎಸ್‌ಆರ್ ರಸ್ತೆ ಹಂಪನಕಟ್ಟೆ ಮಾರ್ಗವಾಗಿ ವೆಂಕಟ್ರಮಣ ದೇವಸ್ಥಾನದ ಮುಂಭಾಗದಿಂದ ರಥಬೀದಿ, ಅಳಕೆ ಮಾರ್ಗವಾಗಿ ಬೆಳಗ್ಗೆ ಮತ್ತೆ ಕುದ್ರೋಳಿಗೆ ತಲುಪಿತು. ಬಳಿಕ ಶಾದರಾ ದೇವಿಯ ವಿಗ್ರಹದ ಪೂಜೆ ಹಾಗೂ ಉತ್ಸವ ಮೂರ್ತಿಗಳನ್ನು ಕೆರೆಯಲ್ಲಿ ವಿಸರ್ಜನೆ ನಡೆಯಿತು.

Related posts

Leave a Reply