Header Ads
Header Ads
Breaking News

ಮಂಗಳೂರು ದಸಾರಕ್ಕೆ ಕೊರಗಜ್ಜ ದೈವದ ಸ್ತಬ್ಧಚಿತ್ರ ಮೆರಗು

ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ವೈಭವದ ಮಂಗಳೂರು ದಸರಾಕ್ಕೆ ಅದ್ಧೂರಿಯಾಗಿ ತೆರೆಬಿತ್ತು. ಈ ಬಾರಿಯ ದಸರಾ ಶೋಭಾಯಾತ್ರೆಗೆ ಪದುವ ಫ್ರೆಂಡ್ಸ್ ಕ್ಲಬ್ ಅವರ ಕೊರಗಜ್ಜ ದೈವದ ಸ್ತಬ್ಧಚಿತ್ರ ದಸರಾಕ್ಕೆ ಮೆರುಗು ಕಂಡಿತು. ಕಳೆದ10 ದಿನಗಳಿಂದ ನಡೆಯುತ್ತಿದ್ದ ವೈಭವದ ಮಂಗಳೂರು ದಸರಾಕ್ಕೆ ಅದ್ಧೂರಿಯ ತೆರೆಬಿದ್ದಿದೆ. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಶಾರದೆ, ಗಣಪತಿ ಸಹಿತ ನವದುರ್ಗೆಯರ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.ಸ್ತಬ್ಧಚಿತ್ರವೊಂದು ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.ಅದ್ರಲ್ಲೂ ತುಳುನಾಡಿನ ಕಾರ್ಣಿಕ ಶಕ್ತಿಯನ್ನ ಹೊಂದಿರುವ ದೈವ ಕೊರಗಜ್ಜ, ತುಳುವರ ನಂಬಿಕೆ ಜಾತಿ- ಧರ್ಮದ ಬೇಧವಿಲ್ಲದೆ ಎಲ್ಲರ ಅಚ್ಚರಿಗೆ ಕಾರಣವಾಗಿರುವ ಕೊರಗಜ್ಜನ ಸ್ತಬ್ಧಚಿತ್ರ ಈ ಬಾರಿ ಮಂಗಳೂರು ದಸಾರಕ್ಕೆ ಮತ್ತಷ್ಟು ಮೆರುಗು ನೀಡಿತು.ಮಂಗಳೂರಿನ ಪದುವ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಮೂಡಿ ಬಂದ ಸ್ತಬ್ಧಚಿತ್ರ. ಕಳೆದ ನಾಲ್ಕು ವರ್ಷದಗಳಿಂದ ಮಂಗಳೂರು ದಸಾರಕ್ಕೆ ತುಳುನಾಡಿನ ಆಚರಣೆ, ಸಂಸ್ಕೃತಿ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಬಾರಿಯ ದಸಾರಕ್ಕೆ ಕೊರಗಜ್ಜ ದೈವದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆದಿದ್ದು, ಪದುವ ಫ್ರೆಂಡ್ಸ್ ಕ್ಲಬ್‌ನ ಕಾರ್ಯಕ್ಕೆ ಎಲ್ಲಾರ ಮೆಚ್ಚುಗೆ ಪಾತ್ರವಾಗಿತು.ಇದಕ್ಕೂ ಮೊದಲು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯ್ತು, ತದ ಬಳಿಕ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು, ಜನಮನ ಗೆದ್ದಿತು.ಇದರ ಜೊತೆಯಲ್ಲಿ ಚೆಂಡೆ ಕುಣಿತ ಮತ್ತಷ್ಟು ಜನರನ್ನ ಮನರಂಜಿಸಿತು.ಇಷ್ಟೆ ಅಲ್ಲದೇ 100ಕ್ಕೂ ಅಧಿಕ ವೇಷಭೂಷಣ, ವಾದ್ಯಮೇಳ ತಂಡ,ಭಜನಾ ತಂಡಗಳು, ಗೊಂಬೆ ಕುಣಿತದ ತಂಡಗಳು, ಹುಲಿ ಕುಣಿತ ತಂಡ, ಭಾಗವಹಿಸಿದ್ದವು.ವಿವಿಧೆಡೆ ಆರ್ಕೇಸ್ಟಾ ತಂಡಗಳಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಒಟ್ಟಾರೆಯಾಗಿ ಈ ಬಾರಿ ಮಂಗಳೂರು ದಸಾರ ಮೆರವಣಿಗೆಯಲ್ಲಿ ಸೇರಿದವರಲ್ಲದೆ ಇಕ್ಕೆಲ್ಲಗಳಲ್ಲಿರುವ ಕಟ್ಟಡಗಳಲ್ಲೂ ಜನ ನಿಂತೂ ಶೋಭಾಯಾತ್ರೆಯ ಜೊತೆಗೆ ಕೊರಗಜ್ಜ ದೈವದ ಸ್ತಬ್ಧಚಿತ್ರ ನೋಡಿ ಕಣ್ತುಂಬಿಕೊಂಡರು.

Related posts

Leave a Reply