Header Ads
Header Ads
Breaking News

ಮಂಗಳೂರು ಧರ್ಮಪ್ರಾಂತ್ಯಕ್ಕೆ ನೂತನ ಬಿಷಪ್

ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಕಿನ್ನಿಗೋಳಿ ಸಮೀಪದ ಡಾ. ಪೀಟರ್ ಪೌಲ್ ಸಲ್ಡಾನಾ ಆಯ್ಕೆಯಾಗಿದ್ದಾರೆ. ಕಿನ್ನಿಗೋಳಿ ಸಮೀಪದ ಐಕಳ ಕಜೆಗುರಿ ನಿವಾಸಿಯಾದ ಇವರು 1968 ಎಪ್ರಿಲ್ 27 ರಂದು ಜನಿಸಿದರು. ದಾಮಸ್ ಕಟ್ಟೆ ಪಾಂಪೆಯಲ್ಲಿ ಪ್ರಾಥಮಿಕ , ಪ್ರೌಢ ಮತ್ತು ಪಿ.ಯು.ಸಿ ಶಿಕ್ಷಣವನ್ನು ಪೂರೈಸಿದ ಇವರು ನಂತರ1991 ಮೇ6 ರಂದು ಗುರು ದೀಕ್ಷೆ ಪಡೆದು ಉಡುಪಿ ಜಿಲ್ಲೆಯ ಮೂಡುಬೆಳ್ಳೆ, ಮಂಗಳೂರಿನ ಮಿಲಾಗ್ರಿಸ್ ಹಾಗೂ ವಿಟ್ಲ ಚರ್ಚ್‌ಗಳಲ್ಲಿ ಸೇವೆ ಸಲ್ಲಿಸಿದ್ದರು.

ಬಳಿಕ ಉನ್ನತ ವ್ಯಾಸಂಗಕ್ಕಾಗಿ ರೋಮ್‌ಗೆ ತೆರಳಿದ ಇವರು ಫೊಂತಿಫಿಕಾಲ್ ಉರ್ಬನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು. ನಂತರ ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.ಬಿಷಪ್ ಆಗಿ ಆಯ್ಕೆಯಾದ ಸಲ್ಡಾನಾ ಅವರು ಮಂಗಳೂರು ಪ್ರಸ್ತುತ ಬಿಷಪ್ ಡಾ. ಅಲೋಷಿಯಸ್ ಪೌಲ್ ಡಿಸೋಜ ಅವರ ಜೊತೆ ಮಂಗಳವಾರ ಸಂಜೆ ಐಕಳ ಕಿರೆಂ ಚರ್ಚ್ ಗೆ ಬೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ತಾವು ಹುಟ್ಟಿ ಬೆಳೆದ ಐಕಳ ಕಜೆಗುರಿಗೆ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರ ಜೊತೆ ಪ್ರಾರ್ಥನೆ ಸಲ್ಲಿಸಿದರು.ಸಲ್ಡಾನಾ ಅವರ ಆಯ್ಕೆಯಿಂದ ಕಿನ್ನಿಗೋಳಿ ಮೂಲದ ಇಬ್ಬರು ಬಿಷಪ್ ಆಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದಂತಾಗುತ್ತದೆ, ಈ ಹಿಂದೆ ಕಿನ್ನಿಗೋಳಿ ಮೂಲದ ಡಾ. ಪಾದರ್ ಹೆನ್ರಿ ಡಿಸೋಜ ಬಿಷಪ್ ಆಗಿ ಆಯ್ಕೆಯಾಗಿದ್ದು ಇದೀಗ ಬಳ್ಳಾರಿ ಧರ್ಮ ಪ್ರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

 

Related posts

Leave a Reply