Header Ads
Header Ads
Breaking News

ಮಂಗಳೂರು ನಗರದಲ್ಲಿ ರಾರಾಜಿಸುತ್ತಿದೆ ಬ್ಯಾನರ್, ಬಂಟಿಂಗ್ ಕಾಂಗ್ರೆಸ್‌ನ ಧ್ವಜ, ಫ್ಲೆಕ್ಸ್‌ಗಳು ಮನಪಾಕ್ಕೆ ಕಾಣುತ್ತಿಲ್ಲವೇ ಬಿಜೆಪಿ ಮುಖಂಡ ವೇದವ್ಯಾಸ್ ಕಾಮತ್ ಪ್ರಶ್ನೆ.

ಬಿಜೆಪಿ ಪಕ್ಷದ ಕಾರ್ಯಕ್ರಮವಿರುವಾಗ ಫ್ಲೆಕ್ಷ್, ಬಂಟಿಂಗ್ಸ್‌ಗಳನ್ನು ತೆರವು ಮಾಡಿದ್ದ ಮನಪಾ ಅಧಿಕಾರಿಗಳಿಗೆ ಕಾಂಗ್ರೆಸ್‌ನ ಧ್ವಜ, ಬಂಟಿಂಗ್ಸ್‌ಗಳು ಕಾಣುತ್ತಿಲ್ಲವೇ ಎಂದು ಮಂಗಳೂರು ದಕ್ಷಿಣ ಬಿಜೆಪಿ ಮಂಡಲ ಅಧ್ಯಕ್ಷ ವೇದವ್ಯಾಸ್ ಕಾಮತ್ ಪ್ರಶ್ನಿಸಿದ್ದಾರೆ.
ಅವರು ಮಂಗಳೂರಿನಲ್ಲಿ v4 ನ್ಯೂಸ್‌ಗೆ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾರ್ಚ್ 20ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್‌ನ ಧ್ವಜ, ಫ್ಲೆಕ್ಸ್‌ಗಳು ನಗರದಾಧ್ಯಂತ ರಾರಾಜಿಸುತ್ತಿದ್ದು, ಮಂಗಳೂರು ನಗರದಲ್ಲಿ ಯಾವುದೇ ರೀತಿಯ ಬಂಟಿಂಗ್ಸ್, ಫ್ಲೆಕ್ಸ್‌ಗಳನ್ನು ಹಾಕಿದ್ದಲ್ಲಿ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಈಗಾಗಲೇ ಜಿಲ್ಲಾಡಳಿತ ಎಚ್ಚರಿಕೆಯ ನೀಡಿದೆ. ಆದರೂ ಜಿಲ್ಲಾಡಳಿತದ ಆದೇಶವನ್ನು ಪಾಲಿಸದೆ ಕಾಂಗ್ರೆಸ್‌ನವರು ಬ್ಯಾನರ್ ಬಂಟಿಂಗ್ಸ್‌ಗಳನ್ನು ಅಳವಡಿಸಿದ್ದಾರೆ. ಇದೀಗ ಮನಪಾ ಅಧಿಕಾರಿಗಳು ಯಾಕೆ ತೆರವು ಮಾಡುತ್ತಿಲ್ಲ. ಬಿಜೆಪಿಗೆ ಒಂದು ನ್ಯಾಯ, ಕಾಂಗ್ರೆಸ್‌ಗೆ ಒಂದು ನ್ಯಾಯಾನಾ ಎಂದು ಪ್ರಶ್ನಿಸಿದರು.
ವರದಿ: ಶರತ್