Header Ads
Breaking News

ಮಂಗಳೂರು ನಗರದಾದ್ಯಂತ ಭಾರೀ ಗಾಳಿ ಮಳೆ : ಕೊಟ್ಟಾರ ಚೌಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮುಳುಗಡೆಯಾಗಿದ್ದು ಟ್ರಾಫಿಕ್ ಜಾಮ್

ಚಂಡಮಾರುತ ಪರಿಣಾಮ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಧಾರಾಕಾರ ಮಳೆಯಾಗಿದ್ದು ಮಂಗಳೂರು ನಗರ ಎಂದಿನಂತೆ ಹೈರಾಣಾಗಿದೆ. ಮಂಗಳೂರಿನ ಕೊಟ್ಟಾರ ಚೌಕಿ, ಅಳಕೆ, ಕದ್ರಿ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ಮಳೆ ನೀರು ಹರಿದು ಅವಾಂತರ ಸೃಷ್ಟಿಯಾಗಿದೆ. ಬೆಳಗ್ಗಿನಿಂದ ನಿರಂತರ ಮಳೆಯಾಗುತ್ತಿದ್ದು ವಾಹನಗಳ ಸಂಚಾರ ಕಷ್ಟವಾಗಿದೆ. ಕೊಟ್ಟಾರ ಚೌಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮುಳುಗಡೆಯಾಗಿದ್ದು ಟ್ರಾಫಿಕ್ ಜಾಮ್ ಆಗಿದೆ. ಮಳೆಗಾಲಕ್ಕೆ ಮಹಾನಗರ ಪಾಲಿಕೆ ಇನ್ನೂ ಸಿದ್ಧತೆ ಮಾಡಿಲ್ಲದ ಕಾರಣ ದಿಢೀರ್ ಆಗಿ ಸುರಿದ ಮಳೆ ಅವಾಂತರ ಸೃಷ್ಟಿಸಿದೆ.

Related posts

Leave a Reply

Your email address will not be published. Required fields are marked *