Header Ads
Breaking News

ಮಂಗಳೂರು ನಗರವನ್ನು ಹಸಿರು ನಗರವನ್ನಾಗಿಸಲು ಪಣ : ಜ್ಯೂಸ್ ಜಂಕ್ಷನ್, ಕೆನರಾ ಬ್ಯಾಂಕ್ ಮತ್ತು ಲಯನ್ಸ್ ಕ್ಲಬ್ ವತಿಯಿಂದ ಗಿಡ ವಿತರಿಸುವ ಕಾರ್ಯಕ್ರಮ

ಮಂಗಳೂರು ನಗರವನ್ನು ಮತ್ತೆ ಹಸಿರು ನಗರವನ್ನಾಗಿಸಲು ವಿವಿಧ ಸಂಸ್ಥೆಗಳು ಪಣ ತೊಟ್ಟಿವೆ. ಮಂಗಳೂರಿನ ಜ್ಯೂಸ್ ಜಂಕ್ಷನ್, ಕೆನರಾ ಬ್ಯಾಂಕ್ ಮತ್ತು ಲಯನ್ಸ್ ಕ್ಲಬ್ ವತಿಯಿಂದ ಗಿಡ ವಿತರಿಸುವ ಕಾರ್ಯಕ್ರಮವು ನಗರದ ಜ್ಯೂಸ್ ಜಂಕ್ಷನ್‌ನಲ್ಲಿ ನಡೆಯಿತು.ಇನ್ನು ಮುಂದೆ ಮಂಗಳೂರು ನಗರ ಹಸಿರು ನಗರವಾಗಲಿದೆ. ಹೌದು ಅಂತಹ ಒಂದು ಮಹತ್ವಕಾರ್ಯಕ್ಕೆ ಮಂಗಳೂರಿನ ವಿವಿಧ ಸಂಸ್ಥೆಗಳು ಮುಂದಾಗಿವೆ. ಮಂಗಳೂರಿನ ಜ್ಯೂಸ್ ಜಂಕ್ಷನ್‌ನಲ್ಲಿ ಕೆನರಾ ಬ್ಯಾಂಕ್, ಲಯನ್ಸ್ ಕ್ಲಬ್ ಮತ್ತು ಜ್ಯೂಸ್ ಜಂಕ್ಷನ್ ಸಹಯೋಗದೊಂದಿಗೆ ಗಿಡ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಸುಮಾರು ಸಾವಿರಕ್ಕೂ ಅಧಿಕ ಗಿಡಗಳನ್ನು ವಿತರಿಸಲಾಯಿತು.

ಈ ಸಂದರ್ಭ ಕೆನರಾ ಬ್ಯಾಂಕ್‌ನ ಜಿ.ಎಮ್. ಯೋಗೀಶ್ ಆಚಾರ್ಯ ಅವರು ಮಾತನಾಡಿ, ಮಂಗಳೂರನ್ನು ಹಸಿರು ನಗರವನ್ನಾಗಿಸಲು ಗಿಡ ವಿತರಣೆ ಮಾಡುತ್ತಿದ್ದೇವೆ. ಮಂಗಳೂರಿಗರು ಎಲ್ಲರೂ ಗಿಡ ನೆಟ್ಟು ಪೋಷಿಸಿ ಎಂದು ಕರೆ ನೀಡಿದರು.

ಆನಂತರ ಲಯನ್ಸ್ ಕ್ಲಬ್‌ನ ಕ್ಯಾಬಿನೆಟ್ ಸೆಕ್ರೆಟರಿ ವಿಜಯ ವಿಷ್ಣು ಮಯ್ಯ ಅವರು ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನ ನಗರದಲ್ಲಿ ಪರಿಸರದ ಕಾಳಜಿ ಕಡಿಮೆಯಾಗುತ್ತಿದೆ. ಆ ನಿಟ್ಟಿನಲ್ಲಿ ಗಿಡ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಜ್ಯೂಸ್ ಜಂಕ್ಷನ್‌ನ ಪ್ರೊಪ್ರೇಟರ್ ಪ್ರಖ್ಯಾತ್ ನಾಯಕ್ ಅವರು ಪ್ರತಿಯೊಬ್ಬರು ಪರಿಸರದ ಕಾಳಜಿ ವಹಿಸುವುದು ಮುಖ್ಯ. ಹಾಗಾಗಿ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರಿನನ ಜನತೆಗೆ ಸಸಿಗಳನ್ನು ವಿತರಿಸಲಾಯಿತು.ಈ ಸಂದರ್ಭ ಲಯನ್ಸ್ ಇಂಟರ್ ನ್ಯಾಶನಲ್‌ನ ವಸಂತ್ ಕುಮಾರ್ ಶೆಟ್ಟಿ, ಲಯನ್ ಶ್ರೀನಾಥ್, ಲಯನ್ ಮಾಧವ್ ಉಳ್ಳಾಲ್, ಜ್ಯೂಸ್ ಜಂಕ್ಷನ್‌ನ ಪ್ರೊಪ್ರೈಟರ್ ಅರುಣ್ ನಾಯಕ್ ಉಪಸ್ಥಿತಿರಿದ್ದರು.

Related posts

Leave a Reply

Your email address will not be published. Required fields are marked *