Header Ads
Header Ads
Breaking News

ಮಂಗಳೂರು ಪಾಲಿಕೆಯ ಗುತ್ತಿಗೆ ಕಾರ್ಮಿಕರು, ಕಾಯಂಗೊಳಿಸುವಂತೆ ಜಿಲ್ಲಾ ನೌಕರರ ಆಗ್ರಹ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ೨೫ ವರ್ಷಗಳಿಂದ ನಿರಂತರ ಖಾಲಿ ಹುದ್ದೆಯಲ್ಲಿ ಗುತ್ತಿಗೆಯಾಧಾರಿತ ಕೆಲಸದಲ್ಲಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ನಾಲ್ಕನೇ ದರ್ಜೆ ನೌಕರರು ಒತ್ತಾಯಿಸಿದ್ದಾರೆ.
೪೨ ದಿನಕೂಲಿ ಪೌರಕಾರ್ಮಿಕರು ಹಾಗೂ ಡ್ರೈನೇಜ್ ವಿಭಾಗದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ೩೫ ಮಂದಿ ಯುಜಿಡಿ ಕಾರ್ಮಿಕರು, ೭೬೦ ಮಂದಿ ಮತ್ತು ಪೌರ ಕಾರ್ಮಿಕರನ್ನು ಖಾಯಂ ಮಾಡಬೇಕು ಎಂದು ದಕ್ಷಿಣ ಕನ್ನಡ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘ ಆಗ್ರಹಿಸಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಹಿಂದೇಯು ಪಾಲಿಕೆಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ೨೦೧೭ರ ಮಾರ್ಚ್‌ನಲ್ಲಿ ರಾಜ್ಯದ ೧೩,೦೦೦ ಪೌರ ಕಾರ್ಮಿಕರನ್ನು ಖಾಯಂ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಅದು ಭರವಸೆಯಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಜುಲೈ ೨೫ರಂದು ರಾಜ್ಯದಾದ್ಯಂತ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Related posts

Leave a Reply