Breaking News

ಮಂಗಳೂರು ಪಿಲಿಕುಳದ ಅರ್ಬನ್ ಹಾಥ್, ರಾಜ್ಯ ಬೆಳೆ ಉತ್ಪನ್ನಗಳ ಮೇಳ


ಮಂಗಳೂರಿನ ಪಿಲಿಕುಳದ ಅರ್ಬನ್ ಹಾಥ್ ಸಂಕೀರ್ಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಸಂತೋತ್ಸವ ೨೦೧೭ಕ್ಕೆ ಚಾಲನೆ ದೊರಕಿತ್ತು.
ಮಾವಿನ ಹಣ್ಣನ್ನು ಕತ್ತರಿಸುವ ಮೂಲಕ ಶಾಸಕ ಅಭಯಚಂದ್ರ ಜೈನ್ ಚಾಲನೆ ನೀಡಿದರು. ರಾಜ್ಯದ ವಿವಿಧ ಬಗೆಯ ಮಾವು, ಹಲಸಿನ ಹಣ್ಣುಗಳು, ಅನಾನಸು, ಪಪ್ಪಾಯಿ ಹಾಗೂ ಇತರೆ ಹಣ್ಣುಗಳು, ವಿದೇಶಿ ಹಣ್ಣುಗಳು ಸೇರಿದಂತೆ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲದೇ ಮೀನು ಪ್ರಿಯರಿಗೆ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ತಾಜಾ ಮೀನುಗಳ ಮತ್ತು ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ. ಇದೇ ವೇಳೆಯಲ್ಲಿ ಹಣ್ಣುಗಳ ಬೀಜ, ಕೃಷಿ ಬೀಜಗಳ ಮತ್ತು ಪಾನೀಯಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಾಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಶಿವಮೊಗ್ಗ, ಬೀದರ್ ಹೀಗೆ ವಿವಿಧ ಕಡೆಗಳ ರೈತರು ಆಗಮಿಸಿ, ತಾವು ಬೆಳಸಿದ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡುತ್ತಿದ್ದಾರೆ.

Related posts

Leave a Reply