Header Ads
Header Ads
Header Ads
Breaking News

ಮಂಗಳೂರು ಬಜೆಟ್ ಪೂರ್ವಭಾವಿ ಸಭೆ : ಪುಟ್‌ಪಾತ್, ಪಾರ್ಕಿಂಗ್, ವ್ಯವಸ್ಥೆ ಕಲ್ಪಿಸಲು ಹಣ ಮೀಸಲಿಡಿ ನಾಗರಿಕ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೇಳಿಕೆ

ಮಂಗಳೂರು ಮಹಾನಗರ ಪಾಲಿಕೆಯ ಬಜೆಟ್‌ನ ಪೂರ್ವಭವಿ ಸಾರ್ವಜನಿಕ ಸಭೆಯು ಸುರತ್ಕಲ್‌ನಲ್ಲಿ ನಡೆಯಿತು. ಸುರತ್ಕಲ್ ಬೆಳೆಯುತ್ತಿರುವ ನಗರವಾಗಿದ್ದು ಇದೀಗ ವಾಹನ ಪಾರ್ಕಿಂಗ್ ಸಮಸ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇನ್ನು ಪಾದಚಾರಿಗಳಿಗೆ ನಡೆಯಲು ನಿಗದಿತ ಫುಟ್‌ಪಾತ್ ರಸ್ತೆ ದಾಟುವಿಕೆ ವ್ಯವಸ್ಥೆಗಳು ಅಗತ್ಯವಾಗಿದ್ದು ಬಜೆಟ್‌ನಲ್ಲಿ ಹಣ ಮಿಸಲಿಟ್ಟು ಆದ್ಯತೆಯ ಮೇರೆಗೆ ಮಾಡಿಸಬೇಕು ಎಂದು ಸಭೆಯಲ್ಲಿ ನಾಗರಿಕ ಸಮಿತಿಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮನವಿ ಮಾಡಿದರು. ಕೆನರಾ ಬ್ಯಾಂಕಿನಿಂದ ಐ ಕೇರ್ ಅಂಗಡಿವರೆಗೆ ನಟರಾಜ ಟಾಕೀಸ್‌ನಿಂದ ಗುಡ್ಡೆಕೊಪ್ಲ ರಸ್ತೆ, ಬಿ.ಆರ್. ಬೇಕರಿಯಿಂದ ಪದ್ಮಾವತಿ ಆಸ್ಪತ್ರೆವರೆಗೆ ಸರಿಯಾದ ಪಾದಚಾರಿ ವ್ಯವಸ್ಥೆ ಆಗಬೇಕು ಎಂದು ಹೇಳಿದರು. ಈ ಸಂದರ್ಭ ಮಂಗಳೂರು ಪಾಲಿಕೆಯ ಆಯುಕ್ತರಾದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *