Header Ads
Breaking News

ಮಂಗಳೂರು ಬಾಂಬ್ ಇಟ್ಟ ಪ್ರಕರಣ : ಆದಿತ್ಯರಾವ್‍ನನ್ನು ಪ್ರತ್ಯಕ್ಷದರ್ಶಿಗಳ ಎದುರು ಪರೇಡ್ ನಡೆಸಲು ಸಿದ್ಧತೆ

ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.20ರಂದು ಸ್ಫೋಟಕ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಆದಿತ್ಯ ರಾವ್‍ನನ್ನು ಪ್ರತ್ಯಕ್ಷದರ್ಶಿಗಳ ಎದುರು ಪರೇಡ್ ನಡೆಸಲು ಪೊಲೀಸ್ ಇಲಾಖೆ ತಯಾರಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಫೋಟಕ ಇರಿಸಿದ್ದ ಪ್ರಕರಣದ ತನಿಖಾಧಿಕಾರಿಗಳು ಈಗಾಗಲೇ 45ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ 10ಕ್ಕೂ ಅಧಿಕ ಪ್ರತ್ಯಕ್ಷದರ್ಶಿಗಳ ಎದುರು ಶಂಕಿತ ಉಗ್ರ ಆದಿತ್ಯ ರಾವ್‍ನನ್ನು ಪರೇಡ್ ನಡೆಸಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಪರೇಡ್ ನಡೆಸಲು ಕ್ರಮ ಕೈಗೊಳ್ಳಲು ಮಂಗಳೂರು ತಹಶೀಲ್ದಾರ್‍ಗೆ ಪೊಲೀಸ್ ರು ಪತ್ರ ಬರೆದಿದ್ದಾರೆ. ತಹಶೀಲ್ದಾರ್‍ರು ಶೀಘ್ರದಲ್ಲಿಯೇ ಪ್ರತಿಕ್ರಿಯೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದ ಸ್ಫೋಟಕವನ್ನು ನಾಶ ಮಾಡಲಾಗಿತ್ತು. ಸ್ಫೋಟಕದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಅದರ ವರದಿ ಇನ್ನೂ ತನಿಖಾಧಿಕಾರಿಗಳಿಗೆ ತಲುಪಿಲ್ಲ. ಶೀಘ್ರದಲ್ಲಿಯೇ ವರದಿ ಬರುವ ಸಾಧ್ಯತೆ ಇದೆ. ವರದಿಯ ಪರಿಶೀಲನೆಯ ನಂತರವೇ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲುಪೊಲೀಸ್ ರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

Related posts

Leave a Reply

Your email address will not be published. Required fields are marked *