Breaking News

ಮಂಗಳೂರು ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ, ಐದನೇ ವರುಷದ ಮಹಾಸಭೆ


ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪರಸ್ಥರ ಸಂಘದ ೫ನೇ ವಾರ್ಷಿಕ ಮಹಾಸಭೆಯು ನಗರದ ಎನ್‌ಜಿಓ ಹಾಲ್ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಡಿವೈಎಫ್‌ಐ ಮುಖಂಡ ಇಮ್ತಿಯಾಜ್ ಮಾತನಾಡಿ, ಬೀದಿ ಬದಿ ವ್ಯಾಪರಸ್ಥರ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಬೀದಿ ಬದಿ ವ್ಯಾಪರಸ್ಥರು ತಕ್ಕ ಪಾಠ ಕಲಿಸಬೇಕಾದ ಅನಿವಾರ್ಯತೆ ಇದೆ ಅಂತಾ ಹೇಳಿದರು. ಈ ವೇಳೆ ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್, ಮಹಮ್ಮದ್ ಮುಸ್ತಾಫ್, ಸಂತೋಷ್ ಆರ್‌ಎಸ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply