Header Ads
Header Ads
Header Ads
Breaking News

ಮಂಗಳೂರು ಮಹಾನಗರಪಾಲಿಕೆ ದಿನಾಚರಣೆ ಮನಪಾ ಸದಸ್ಯರು ಸಿಬ್ಬಂದಿವರ್ಗದವರಿಗಾಗಿ ಕ್ರೀಡೋತ್ಸವ ಉರ್ವ ಮಾರ್ಕೆಟ್ ಮೈದಾನದಲ್ಲಿ ನಡೆದ ಸ್ಪರ್ಧೆ

ಮಂಗಳೂರು ಮಹಾನಗರ ಪಾಲಿಕೆಯ ದಿನಾಚರಣೆಯ ಅಂಗವಾಗಿ ಪಾಲಿಕೆಯಲ್ಲ ಎಲ್ಲಾ ಸದಸ್ಯರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಕ್ರೀಡೋತ್ಸವವು ಉರ್ವ ಮಾರ್ಕೆಟ್ ಮೈದಾನದಲ್ಲಿ ಜರುಗಿತು.
ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು, ಉಪ ಮಹಾಪೌರರು, ಅಧ್ಯಕ್ಷರು, ಸದಸ್ಯರು, ಆಯುಕ್ತರು, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವದ ಸಹಯೋಗದೊಂದಿಗೆ ನಡೆದ ಕ್ರೀಡೋತ್ಸವವನ್ನು ಗಣ್ಯರು ಬೆಲೂನು ಹಾರಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ. ಜೆ.ಆರ್ ಲೋಬೊ ಮಾತನಾಡಿ, ಮಹಾನಗರ ಪಾಲಿಕೆಯ ಸಿಬ್ಬಂದಿ ವರ್ಗದವರಿಗೆ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಂಡಿರುವುದು ಸಂತಸದ ವಿಚಾರ. ಕೆಲಸದ ಜೊತೆಯಲ್ಲಿ ಕ್ರೀಡೋತ್ಸವ ಹಮ್ಮಿಕೊಂಡಿರುವುದು ಸ್ನೇಹ ಬಾಂಧವ್ಯ ಹೆಚ್ಚಾಗುತ್ತದೆ ಎಂದು ಹೇಳಿದರು.

ಅನಂತರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಮಾತನಾಡಿ, ಶ್ರೀನಿವಾಸ ಮಲ್ಯದ ವಿಶೇಷ ಕೊಡುಗೆ ಮಂಗಳೂರಿಗಿದೆ. ಶ್ರೀನಿವಾಸ ಮಲ್ಯ ಅವರ ಹೆಸರಿನಲ್ಲಿ ಶ್ರೀನಿವಾಸ ಮಲ್ಯ ಗೌರವ ಪ್ರಶಸ್ತಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ದಿನಾಚರಣೆಯನ್ನು ಡಿಸೆಂಬರ್ ೮ರಂದು ಹಮ್ಮಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಇಂದು ಕ್ರೀಡೋತ್ಸವವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕ ಮೊಯ್ದಿನ್ ಬಾವಾ, ವಿಧಾನ ಪರಿಷತ್‌ನ ಶಾಸಕರಾದ ಗಣೇಶ್ ಕಾರ್ಣಿಕ್ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ: ನಾಗರಾಜ್ ಮಂಗಳೂರು

Related posts

Leave a Reply