Header Ads
Header Ads
Header Ads
Breaking News

ಮಂಗಳೂರು ಮಹಾ ನಗರ ಪಾಲಿಕೆಯ ಸಾಮನ್ಯ ಸಭೆ ಮೇಯರ್ ಕವಿತಾ ಸನಿಲ್ ಅಧ್ಯಕ್ಷೆಯಲ್ಲಿ ಸಭೆ ಕಸವಿಲೇವಾರಿ ಬಗ್ಗೆ ಗಂಭೀರ ಚರ್ಚೆ

 ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರಿಯಾದ ರೀತಿಯಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ ಎಂದು ಆಂಟೋನಿ ವೆಸ್ಟ್ ಕಂಪನಿಯ ವಿರುದ್ಧ ಆಡಳಿತ ಪಕ್ಷ ಹಾಗೂ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಂಪನಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸದಸ್ಯರು ಒಕ್ಕೊರಲಿ ಮೂಲಕ ಆಗ್ರಹಿಸಿದ್ದಾರೆ.
 ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೇಯರ್ ಕವಿತಾ ಸನಿಲ್ ಅಧ್ಯಕ್ಷೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶವನ್ನು ವ್ಯಕ್ತಪಡಿಸಿದ್ರು. ವಿಷಯವನ್ನು ಪ್ರಸ್ತಾಪಿಸಿದ ಸದಸ್ಯ ದಯಾನಂದ್ ಶೆಟ್ಟಿ, ಸರಿಯಾದ ಕಸ ವಿಲೇವಾರಿಯಾಗದೇ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜವಾಗುತ್ತಿಲ್ಲ ಎಂದು ಸಭೆಯಲ್ಲಿ ಗಮನ ಸೆಳೆದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಹಾಗೂ ವಿಪಕ್ಷ ಸದಸ್ಯರು ಕೂಡ ಧ್ವನಿಗೂಡಿಸಿದರು. ಈ ನಡುವೆ ಮಾಜಿ ಮೇಯರ್ ಮಹಾಬಲ ಮಾರ್ಲ ಮಾತನಾಡಿ, ಕಾರ್ಮಿಕರಿಗೆ ಈಗಾಗ್ಲೇ ಪಾಲಿಕೆಯಿಂದ ವೇತನ ಹೋಗುತ್ತಿದೆ. ಅದ್ರೆ ಯಾವ ಆಧಾರದಲ್ಲಿ ವೇತನ ಹೋಗುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು,
ಈ ನಡುವೆ ಪರಿಸರ ಅಭಿಯಂತರ ಮಧು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಹುಲ್ಲು ಕತ್ತರಿಸುವ ಮಿಷನ್ ನೀಡಲು ಆಂಟೋನಿ ವೆಸ್ಟ್ ಕಂಪನಿಗೆ ನಿರ್ದೇಶನ ನೀಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಈಗಾಗಲೇ ನನ್ನ ಗಮನಕ್ಕೂ ಬಂದಿದೆ. ಹಲವಾರು ಬಾರಿ ಸಭೆಯನ್ನು ನಡೆಸಲಾಗಿದೆ. ಇನ್ನೂ ಮುಂದೆ ಪಾಲಿಕೆಯ ೬೦ ಸದಸ್ಯರ ಅನುಮತಿಯ ಮೂಲಕ ಹಣ ನೀಡಬೇಕು ಎಂದು ಮೇಯರ್ ಕವಿತಾ ಸನಿಲ್ ಸಭೆಯಲ್ಲಿ ಹೇಳಿದರು.
ಈ ನಡುವೆ ಕಮೀಷನರ್ ಮಹಮ್ಮದ್ ನಝೀರ್, ಲೋಪ ದೋಷದ ಬಗ್ಗೆ ಕಂಪನಿಯ ಗಮನಕ್ಕೆ ತರಲಾಗಿದೆ. ಮುಂದಿನ ೧೫ ದಿನಗಳ ತನಕ ಸಮಯಾವಕಾಶ ನೀಡಿ, ಯಾವುದೇ ಪ್ರಗತಿ ಇಲ್ಲದೇ ಹೋದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವ್ರು ಹೇಳಿದರು.
ಸಭೆಯಲ್ಲಿ ಉಪಮೇಯರ್ ರಜಿನೀಶ್, ಸ್ಥಾಯಿ ಸಮಿತಿ ಅಧ್ಯಕ್ಷಗಳಾದ ಪ್ರತಿಭಾ ಕುಳಾಯಿ, ನಾಗವೇಣಿ ಮತ್ತಿತರು ಉಪಸ್ಥತಿದರು.

Related posts

Leave a Reply