Header Ads
Header Ads
Breaking News

ಮಂಗಳೂರು ಮಹೇಶ್ ಪಿಯು ಕಾಲೇಜಿನಲ್ಲಿ 2018-19ನೇ ಸಾಲಿನ ಸ್ಟುಡೆಂಟ್ ಯೂನಿಯನ್ ಕೌನ್ಸಿಲ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಅತಿಯಾದ ಆತ್ಮವಿಶ್ವಾಸ ಮತ್ತು ದುರಾಹಂಕಾರ ಎಂದಿಗೂ ನಿಮ್ಮಲ್ಲಿ ಬೆಳೆಯಬಾರದು ಎಂದರು.ಈ ಸಂದರ್ಭ ಕಾಲೇಜಿನ ಅಡ್‌ಮಿನಿಸ್ಟ್ರೇಟರ್. ಅನಿಲ್ ಮಸ್ಕರೇನಸ್ ನೂತನವಾಗಿ ಆಯ್ಕೆಯಾದ ಸ್ಟುಡೆಂಟ್ ಯೂನಿಯನ್ ಕೌನ್ಸಿಲ್‌ನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರುನಂತರ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ನವೀನ್ ಶೆಟ್ಟಿ.ಕೆ ನೂತನವಾಗಿ ಆಯ್ಕೆಯಾದ ಸ್ಟುಡೆಂಟ್ ಯೂನಿಯನ್ ಕೌನ್ಸಿಲ್‌ನ ಪದಾಧಿಕಾರಿಗಳು ನಿಷ್ಠೆ ಮತ್ತು ಶ್ರದ್ದೆಯಿಂದ ಕಾಲೇಜಿನ ಘನತೆ ಮತ್ತು ಗೌರವಕ್ಕೆ ದಕ್ಕೆ ಬರದಂತೆ ನೋಡಿಕೊಳ್ಳಬೇಕು ಮತ್ತು ಇತರ ವಿದ್ಯಾರ್ಥಿಗಳು ಅವರೊಂದಿಗೆ ಸಹಕರಿಸಬೇಕು ಎಂದು ಹೇಳಿದರು.ಕಾಲೇಜಿನ ವಿದ್ಯಾರ್ಥಿಗಳು ಭರತನಾಟ್ಯ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮುಖ್ಯ ಅಥಿತಿಯಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಅಸಿಸ್ಟೆಂಟ್ ಪ್ರೋಫೆಸರ್. ಪ್ರೀತಿ ಕೀರ್ತಿ ಡಿ’ಸೋಜಾ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ನೂತನವಾಗಿ ಆಯ್ಕೆಯಾದ ಸ್ಟುಡೆಂಟ್ ಯೂನಿಯನ್ ಕೌನ್ಸಿಲ್‌ನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಾದ ನೀವು ಈ ಸಂದರ್ಭದಲ್ಲಿಯೇ ನಿಮ್ಮಲ್ಲಿ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಇದು ಉತ್ತಮ ಸಮಯ.

ಕಾರ್ಯಕ್ರಮದಲ್ಲಿ ಅದ್ಯಾಪಕಿ ಮತ್ತು ಸ್ಟುಡೆಂಟ್ ಯೂನಿಯನ್ ಕೌನ್ಸಿಲ್ ಇನ್‌ಚಾರ್ಜ್ ಆಗಿರುವ ಮಿಸ್. ಲಾವಣ್ಯ, ಸ್ಟಾಫ್ ಸೆಕ್ರೇಟರಿ ಮಿಸ್.ಯಶಸ್ವಿನಿ, ಸ್ಟುಡೆಂಟ್ ಯೂನಿಯನ್ ಕೌನ್ಸಿಲ್ ಪ್ರೆಸಿಡೆಂಟ್ ಮಿಸ್.ಐಶ್ವರ್ಯ ಕೇಶವ್ ಮತ್ತು ಕಾಲೇಜಿನ ವಿದ್ಯಾಥಿಗಳು ಅದ್ಯಾಪಕರು ಉಪಸ್ಥಿರಿದ್ದರು.

Related posts

Leave a Reply